ತಂತ್ರಜ್ಞಾನ ಕಲಿತರೆ ಪೈಪೊಟಿ ಸಾಧ್ಯ : ಬೊಮ್ಮಾಯಿ
ಹಾವೇರಿ, 18 ಜನವರಿ (ಹಿ.ಸ.) : ಆ್ಯಂಕರ್ : ಜ್ಞಾನದಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳು ಯಾರಿಗೂ ಕೂಡ ಕಡಿಮೆ ಇಲ್ಲ. ಗ್ರಾಮಿಣ ಪ್ರದೇಶದ ಶಾಲೆಯಲ್ಲಿ ಮಕ್ಕಳಿಗೆ ತಂತ್ರಜ್ಞಾನ, ತಂತ್ರಾಂಶ ಜ್ಞಾನ ಕಲಿಸಬೇಕು ಅಂದರೆ ಮಾತ್ರ ಗ್ರಾಮೀಣ ಮಕ್ಕಳು ತೀವ್ರವಾದ ಪೈಪೋಟಿ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ
BsB


ಹಾವೇರಿ, 18 ಜನವರಿ (ಹಿ.ಸ.) :

ಆ್ಯಂಕರ್ : ಜ್ಞಾನದಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳು ಯಾರಿಗೂ ಕೂಡ ಕಡಿಮೆ ಇಲ್ಲ. ಗ್ರಾಮಿಣ ಪ್ರದೇಶದ ಶಾಲೆಯಲ್ಲಿ ಮಕ್ಕಳಿಗೆ ತಂತ್ರಜ್ಞಾನ, ತಂತ್ರಾಂಶ ಜ್ಞಾನ ಕಲಿಸಬೇಕು ಅಂದರೆ ಮಾತ್ರ ಗ್ರಾಮೀಣ ಮಕ್ಕಳು ತೀವ್ರವಾದ ಪೈಪೋಟಿ ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಕಳಸೂರ ಗ್ರಾಮದ ಎಸ್.ಹೆಚ್ ಪಾಟೀಲ ಸರಕಾರಿ ಪ್ರೌಢ ಶಾಲೆಯ ರಜತ ಮಹೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಪಾಟೀಲರು 25 ವರ್ಷದಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ನೂರು ವರ್ಷ ಆದರೂ ಕೂಡ ಸಮಾಜಕ್ಕೆ ಅನುಕೂಲ ಆಗುತ್ತದೊ ಇಲ್ಲವೋ ಗೊತ್ತಿಲ್ಲ. ಆದರೆ, ಒಂದು ಸಂಸ್ಥೆ 25 ವರ್ಷ ಅಂದರೆ ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದೆ. ಸುತ್ತಲಿನ ಗ್ರಾಮಗಳ ಮಕ್ಕಳಿಗೆ ಶಿಕ್ಷಣ ಸೇವೆ ಮಾಡಿದ್ದಾರೆ, ಶಿಕ್ಷಣಕ್ಕೆ ಲೆಕ್ಕ ಇಲ್ಲ. ಸರಸ್ವತಿಗೆ ಲೆಕ್ಕ ಇಲ್ಲ. ಆದರೆ, ಲಕ್ಷ್ಮಿಗೆ ಲೆಕ್ಕ ಇದೆ.‌ ಯಾರ ಬಳಿ ಸರಸ್ವತಿ ಇದೆ. ಅವರ ಬಳಿ ಲಕ್ದ್ಮಿ ಬರುವ ಕಾಲ ಇದು. ಸರಸ್ವತಿಗೆ ಅಗಾಧತೆ ಇದೆ. ಜಗದಗಲ ಮುಗಿಲಗಲ ಅಂತಾರಲ್ಲಾ ಹಾಗೆ ಸರಸ್ವತಿ ಸಮುದ್ರದ ನೀರು ಇದ್ದಹಾಗೆ ಅದರಿಂದ ಎಷ್ಟು ನೀರು ತೆಗೆದುಕೊಂಡರೂ ಕಡಿಮೆ ಆಗುವುದಿಲ್ಲ. ಸರಸ್ವತಿ ಅಂದರೆ ಜ್ಞಾನ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande