

ಬಳ್ಳಾರಿ, 18 ಜನವರಿ (ಹಿ.ಸ.) :
ಆ್ಯಂಕರ್ : ಬ್ಯಾನರ್ ಗಲಾಟೆ ವಿರೋಧಿಸಿ ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶ ನಡೆದ ಎಪಿಎಂಸಿ ಸ್ಥಳದಲ್ಲಿದ್ದ ಊಟದ ಪ್ಲೇಟ್, ಕುಡಿಯುವ ನೀರಿನ ಪ್ಲಾಸ್ಟಿಕ್ ಕಪ್-ಪೌಚ್ ಇನ್ನಿತರೆ ಕಸವನ್ನು ಬಿಜೆಪಿ ನಗರ ಘಟಕ ಮತ್ತು ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರ ನೇತೃತ್ವದಲ್ಲಿ ಭಾನುವಾರ ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು.
ಬಿಜೆಪಿಯ `ಸ್ವಚ್ಛ ಭಾರತ' ಶೀರ್ಷಿಕೆ ಅಡಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಜಿ. ವೆಂಕಟರಮಣ ಅವರು ನೀಡಿದ್ದ ಕರೆಗೆ ಸ್ಪಂದಿಸಿದ ಕಾರ್ಯಕರ್ತರು ಸ್ವಯಂ ಸೇವಕರಾಗಿ ಪಾಲ್ಗೊಂಡು, ಸಭೆ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿ ಶ್ರಮದಾನ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್