ಅನ್ನ ಸುವಿಧ” ಯೋಜನೆ : ನಾಗರಿಕರ ಮನೆ ಬಾಗಿಲಿಗೆ ಪಡಿತರ
ಚಿತ್ರದುರ್ಗ, 18 ಜನವರಿ (ಹಿ.ಸ.) : ಆ್ಯಂಕರ್ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 75 ವರ್ಷ ಮೇಲ್ಪಟ್ಟ ಏಕ ಸದಸ್ಯ ಪಡಿತರ ಚೀಟಿದಾರ ಹಿರಿಯ ನಾಗರಿಕರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಣೆ ಆರಂಭಿಸಿದೆ. ಮುಖ್ಯಮಂತ್ರಿಯವರ ಬಜೆಟ್ ಘೋಷಣೆಯಂತೆ, ಜನವರಿ
ಅನ್ನ ಸುವಿಧ” ಯೋಜನೆ : ನಾಗರಿಕರ ಮನೆ ಬಾಗಿಲಿಗೆ ಪಡಿತರ


ಚಿತ್ರದುರ್ಗ, 18 ಜನವರಿ (ಹಿ.ಸ.) :

ಆ್ಯಂಕರ್ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 75 ವರ್ಷ ಮೇಲ್ಪಟ್ಟ ಏಕ ಸದಸ್ಯ ಪಡಿತರ ಚೀಟಿದಾರ ಹಿರಿಯ ನಾಗರಿಕರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಣೆ ಆರಂಭಿಸಿದೆ.

ಮುಖ್ಯಮಂತ್ರಿಯವರ ಬಜೆಟ್ ಘೋಷಣೆಯಂತೆ, ಜನವರಿ–2026ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಇ-ಕೆವೈಸಿ ಪೂರ್ಣಗೊಳಿಸಿರುವ ಒಟ್ಟು 6,336 ಏಕ ಸದಸ್ಯ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಒದಗಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಓಟಿಪಿ ಮತ್ತು ಬಯೋಮೆಟ್ರಿಕ್ ಮೂಲಕ ಸಮ್ಮತಿ ಪಡೆದು ನಿಗದಿತ ದಿನಾಂಕದಲ್ಲಿ ಪಡಿತರ ವಿತರಿಸಲಿದ್ದಾರೆ.

ಪ್ರಸ್ತುತ ಅನುಕೂಲಕ್ಕಾಗಿ ತಿಂಗಳ ಮೊದಲ ದಿನದಿಂದ ಕೊನೆಯ ದಿನದವರೆಗೆ ಮನೆ ಬಾಗಿಲಿಗೆ ಪಡಿತರ ವಿತರಿಸಲು ಅವಕಾಶ ನೀಡಲಾಗಿದೆ. ಅರ್ಹ ಹಿರಿಯ ನಾಗರಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande