ದಕ್ಷಿಣ ಆಫ್ರಿಕಾದ ನೌಕಾ ಸಮರಾಭ್ಯಾಸ ಬ್ರಿಕ್ಸ್‌ನ ನಿಯಮಿತ ಅಥವಾ ಸಾಂಸ್ಥಿಕ ಚಟುವಟಿಕೆ ಅಲ್ಲ : ಭಾರತ
ನವದೆಹಲಿ, 17 ಜನವರಿ (ಹಿ.ಸ.) : ಆ್ಯಂಕರ್ : ದಕ್ಷಿಣ ಆಫ್ರಿಕಾದ ಕರಾವಳಿಯಲ್ಲಿ ನಡೆದ ನೌಕಾ ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ, ಈ ವ್ಯಾಯಾಮವು ಬ್ರಿಕ್ಸ್ ರಾಷ್ಟ್ರಗಳ ನಿಯಮಿತ ಅಥವಾ ಸಾಂಸ್ಥಿಕ ಚಟುವಟಿಕೆಯಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಈ ಸಮರಾಭ್ಯಾಸ ಸಂಪೂರ್ಣವಾ
Jaiswal


ನವದೆಹಲಿ, 17 ಜನವರಿ (ಹಿ.ಸ.) :

ಆ್ಯಂಕರ್ : ದಕ್ಷಿಣ ಆಫ್ರಿಕಾದ ಕರಾವಳಿಯಲ್ಲಿ ನಡೆದ ನೌಕಾ ಸಮರಾಭ್ಯಾಸದಲ್ಲಿ ಭಾರತ ಭಾಗವಹಿಸಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ, ಈ ವ್ಯಾಯಾಮವು ಬ್ರಿಕ್ಸ್ ರಾಷ್ಟ್ರಗಳ ನಿಯಮಿತ ಅಥವಾ ಸಾಂಸ್ಥಿಕ ಚಟುವಟಿಕೆಯಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಈ ಸಮರಾಭ್ಯಾಸ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದ ಉಪಕ್ರಮವಾಗಿದ್ದು, ಭಾರತ ಅದರಲ್ಲಿ ಭಾಗಿಯಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇತ್ತೀಚೆಗೆ ನಡೆದ ಈ ನೌಕಾ ಸಮರಾಭ್ಯಾಸದಲ್ಲಿ ಕೆಲವು ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಮಾತ್ರ ಭಾಗವಹಿಸಿದ್ದವು ಎಂದು ಹೇಳಿದರು.

ಇದನ್ನು ಬ್ರಿಕ್ಸ್‌ನ ಅಧಿಕೃತ ಅಥವಾ ನಿಯಮಿತ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಎಲ್ಲಾ ಸದಸ್ಯ ರಾಷ್ಟ್ರಗಳೂ ಇದರಲ್ಲಿ ಪಾಲ್ಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭಾರತವು ಈ ರೀತಿಯ ವ್ಯಾಯಾಮಗಳಲ್ಲಿ ಈ ಹಿಂದೆ ಕೂಡ ಭಾಗವಹಿಸಿಲ್ಲ ಎಂದು ಜೈಸ್ವಾಲ್ ತಿಳಿಸಿದರು. ಭಾರತ ಭಾಗವಹಿಸುವುದು ನಿಯಮಿತವಾಗಿ ನಡೆಯುವ ಭಾರತ–ಬ್ರೆಜಿಲ್–ದಕ್ಷಿಣ ಆಫ್ರಿಕಾ ಕಡಲ ಸಮರಾಭ್ಯಾಸ (IBSAMAR) ನಲ್ಲಿ ಮಾತ್ರವಾಗಿದ್ದು, ಇದರಲ್ಲಿ ಮೂರು ದೇಶಗಳ ನೌಕಾಪಡೆಗಳು ಸೇರಿಕೊಂಡು ಅಭ್ಯಾಸ ನಡೆಸುತ್ತವೆ. IBSAMAR‌ನ ಕೊನೆಯ ಆವೃತ್ತಿ ಅಕ್ಟೋಬರ್ 2024ರಲ್ಲಿ ಆಯೋಜಿಸಲಾಗಿತ್ತು ಎಂದು ಅವರು ಹೇಳಿದರು.

ಗಮನಾರ್ಹವಾಗಿ, ಜನವರಿ 13ರಂದು ದಕ್ಷಿಣ ಆಫ್ರಿಕಾದ ಸೈಮನ್ಸ್‌ಟೌನ್ ನೌಕಾ ನೆಲೆಯ ಸಮೀಪ ಚೀನಾ, ರಷ್ಯಾ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಕೆಲವು ರಾಷ್ಟ್ರಗಳ ಪಾಲ್ಗೊಳ್ಳುವಿಕೆಯಿಂದ ಒಂದು ವಾರದ ಜಂಟಿ ನೌಕಾ ಸಮರಾಭ್ಯಾಸ ಆರಂಭವಾಗಿತ್ತು. ಹೆಚ್ಚುತ್ತಿರುವ ಜಾಗತಿಕ ಕಡಲ ಉದ್ವಿಗ್ನತೆಗೆ ಪ್ರತಿಕ್ರಿಯೆಯಾಗಿ ಈ ಅಭ್ಯಾಸವನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಬಣ್ಣಿಸಿದ್ದು, ಈ ಸಮರಾಭ್ಯಾಸಕ್ಕೆ ಚೀನಾ ನೇತೃತ್ವ ವಹಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande