ಸಂಘಟಿತ ಶಕ್ತಿಯಿಂದ ರಾಷ್ಟ್ರೀಯ ಸಮಗ್ರತೆ ರಕ್ಷಣೆ ಸಾಧ್ಯ : ದತ್ತಾತ್ರೇಯ ಹೊಸಬಾಳೆ
ದರ್ಭಾಂಗ, 17 ಜನವರಿ (ಹಿ.ಸ.) : ಆ್ಯಂಕರ್ : ಹಿಂದೂ ಸಮಾಜ ಸಂಘಟಿತವಾಗಿದ್ದಾಗಲೇ ದೇಶ ಶಕ್ತಿಶಾಲಿಯಾಗಿ ಬೆಳೆಯಿತು ಸಮಾಜದಲ್ಲಿ ವಿಭಜನೆ ಉಂಟಾದಾಗ ವಿದೇಶಿ ಆಕ್ರಮಣಕಾರರು ಭಾರತವನ್ನು ಆಳಿದರು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್
BR-HINDU-CONFERENCE-DATTATREYA-HOABOLE-DARBHUNGA


ದರ್ಭಾಂಗ, 17 ಜನವರಿ (ಹಿ.ಸ.) :

ಆ್ಯಂಕರ್ : ಹಿಂದೂ ಸಮಾಜ ಸಂಘಟಿತವಾಗಿದ್ದಾಗಲೇ ದೇಶ ಶಕ್ತಿಶಾಲಿಯಾಗಿ ಬೆಳೆಯಿತು ಸಮಾಜದಲ್ಲಿ ವಿಭಜನೆ ಉಂಟಾದಾಗ ವಿದೇಶಿ ಆಕ್ರಮಣಕಾರರು ಭಾರತವನ್ನು ಆಳಿದರು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಬಿಹಾರದ ದರ್ಭಾಂಗ ಜಿಲ್ಲೆಯ ತರ್ದಿಹ್ ಬ್ಲಾಕ್‌ನ ಲಘ್ಮಾ ಗ್ರಾಮದಲ್ಲಿ ಆಯೋಜಿಸಿದ್ದ ಒಂದು ದಿನದ ಭವ್ಯ ಹಿಂದೂ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಪ್ರಜ್ಞೆ, ಸಾಮಾಜಿಕ ಸಾಮರಸ್ಯ ಮತ್ತು ಹಿಂದೂ ಸಮಾಜದ ಏಕತೆಯ ಮಹತ್ವವನ್ನು ಒತ್ತಿ ಹೇಳಿದರು.

ಹಿಂದೂ ಸಮಾಜದ ಒಗ್ಗಟ್ಟಿನ ಶಕ್ತಿಯಿಂದಲೇ ಭಾರತದ ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಸಮನ್ವಯ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಕಾಪಾಡಲು ಸಾಧ್ಯ ಎಂದು ಹೊಸಬಾಳೆ ಹೇಳಿದರು.

ಸಮಾಜದ ಪ್ರತಿಯೊಂದು ವರ್ಗವೂ ಒಂದಾಗಿ ಸಾಂಸ್ಕೃತಿಕ ಜಾಗೃತಿಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುವಕರಿಗೆ ವಿಶೇಷವಾಗಿ ಸಂದೇಶ ನೀಡಿದ ಅವರು, ತಮ್ಮ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರದ ಕುರಿತು ಜಾಗೃತರಾಗಬೇಕು ಎಂದರು.

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಅವರ ಸಕ್ರಿಯ ಮತ್ತು ಸಕಾರಾತ್ಮಕ ಭಾಗವಹಿಸುವಿಕೆ ದೇಶಕ್ಕೆ ಹೊಸ ದಿಕ್ಕು ನೀಡುತ್ತದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯ ಆತ್ಮವನ್ನು ವಿವರಿಸಿದ ಅವರು, “ವಸುಧೈವ ಕುಟುಂಬಕಂ” ಎಂಬ ತತ್ವದ ಮೂಲಕ ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಭಾರತ ಕಂಡಿದೆ ಎಂದರು.

ಇದೇ ಕಾರಣದಿಂದ ಭಾರತ ಎಂದಿಗೂ ಆಕ್ರಮಣಶೀಲ ರಾಷ್ಟ್ರವಾಗಿರಲಿಲ್ಲ; ಬದಲಾಗಿ ಜಗತ್ತಿಗೆ ಜ್ಞಾನ, ಶಾಂತಿ, ಸಂಸ್ಕೃತಿ ಮತ್ತು ಮಾನವೀಯತೆಯ ಸಂದೇಶವನ್ನೇ ನೀಡಿದೆ ಎಂದು ಹೇಳಿದರು.

ಸಮ್ಮೇಳನದಲ್ಲಿ ಸುತ್ತಮುತ್ತಲಿನ ಪ್ರದೇಶಗಳ ವಿವಿಧ ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ದತ್ತಾತ್ರೇಯ ಹೊಸಬಾಳೆ ಅವರು ದರ್ಭಾಂಗ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದರು.

ಇದಕ್ಕೂ ಮುನ್ನ, ಲಘ್ಮಾ ಗ್ರಾಮದ ಜೆಎನ್‌ವಿ ಆದರ್ಶ ಸಂಸ್ಕೃತ ಕಾಲೇಜು ಆವರಣದಲ್ಲಿ ನಡೆದ ಸಮಾವೇಶದಲ್ಲಿ ಮಿಥಿಲಾ ಸಂಪ್ರದಾಯದಂತೆ ಪೇಟ ಧರಿಸಿ ಅವರನ್ನು ಗೌರವದಿಂದ ಸ್ವಾಗತಿಸಲಾಯಿತು.

ಲಘ್ಮಾ ಸಂಸ್ಥೆಯ ಬಾಬಾ, ವಿದ್ವಾಂಸರು, ಕಾಲೇಜು ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಹಲವಾರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande