ಬಲೂಚಿಸ್ತಾನದಲ್ಲಿ ಗುಂಡಿನ ದಾಳಿ ; ಮೂವರ ಸಾವು
ನಾನಾ
Firing


ಕ್ವೆಟ್ಟಾ, 16 ಜನವರಿ (ಹಿ.ಸ.) :

ಆ್ಯಂಕರ್ : ಬಲೂಚಿಸ್ತಾನದ ನಾನಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಗಳಲ್ಲಿ ಮಹಿಳಾ ಶಿಕ್ಷಕಿ ಸೇರಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಸಾಬಿ ಜಿಲ್ಲೆಯ ಅಲಹಾಬಾದ್ ಪ್ರದೇಶದಲ್ಲಿರುವ ಬಾಲಕಿಯರ ಪ್ರೌಢಶಾಲೆಯ ಪ್ರಾಂಶುಪಾಲರಾಗಿದ್ದ ಮಹಿಳಾ ಶಿಕ್ಷಕಿ, ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಶಾಲೆಯ ಮುಖ್ಯ ದ್ವಾರದ ಬಳಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳಿಂದ ಗುಂಡಿನ ದಾಳಿಗೆ ಒಳಗಾದರು. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಸಾಬಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.

ಇನ್ನೊಂದು ಘಟನೆಯಲ್ಲಿ, ಡೇರಾ ಮುರಾದ್ ಜಮಾಲಿಯ ವೆಸ್ಟ್ ಹೈಸ್ಕೂಲ್ ಸಮೀಪ ಅಪರಿಚಿತ ಬಂದೂಕುಧಾರಿಗಳು ಪೊಲೀಸ್ ಕಾನ್‌ಸ್ಟೆಬಲ್ ಅಲಿ ಗೋಹರ್ ಮಾಗ್ಸಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.

ಮತ್ತೊಂದೆಡೆ, ಬಲೂಚಿಸ್ತಾನದ ಕೈಗಾರಿಕಾ ಪ್ರದೇಶದಲ್ಲಿ ನಡೆದ ದರೋಡೆ ಯತ್ನದ ವೇಳೆ ಸಿಂಧ್‌ನ ಸಜವಾಲ್ ನಿವಾಸಿ ಖಾಮುನ್ ಖಸ್ಖಾಲಿ ಅವರ ಪುತ್ರ ನಜರ್ ಅಲಿ (30) ಮೃತಪಟ್ಟಿದ್ದಾರೆ.

ಇದೇ ವೇಳೆ, ಪಂಜ್‌ಗುರ್ ಜಿಲ್ಲೆಯ ಹಾಜಿ ಘಾಜಿ ಸುರ್ಡೊ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಸನ್ ಹಯಾತ್ ಗಾಯಗೊಂಡಿದ್ದು, ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಚ್ ಜಿಲ್ಲೆಯ ಬಲಾದಾ ಪ್ರದೇಶದಲ್ಲಿ ಗುರುತಿಸಲಾಗದ ಶಸ್ತ್ರಸಜ್ಜಿತ ಮೋಟಾರ್‌ಸೈಕಲ್ ಸವಾರರು ನಡೆಸಿದ ಗುಂಡಿನ ದಾಳಿಯಲ್ಲಿ ಬಲೂಚಾಬಾದ್ ನಿವಾಸಿ ಮಜೀದ್ ಆಡಮ್ ಗಾಯಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande