‘ಮ್ಯಾಂಗೋ ಪಚ್ಚ’ ಚಿತ್ರದ ‘ಅರಗಿಣಿಯೇ’ ಹಾಡು ಬಿಡುಗಡೆ
ಬೆಂಗಳೂರು, 14 ಜನವರಿ (ಹಿ.ಸ.) : ಆ್ಯಂಕರ್ : ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಮೊದಲ ಹಾಡಾದ ‘ಅರಗಿಣಿಯೇ’ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಸಂಗೀತ ಪ್ರಿಯರ ಗಮನ ಸೆಳೆಯುತ್ತಿದೆ. ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಮನಮೋಹಕ ಸ
Song release


ಬೆಂಗಳೂರು, 14 ಜನವರಿ (ಹಿ.ಸ.) :

ಆ್ಯಂಕರ್ : ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಚಿತ್ರದ ಮೊದಲ ಹಾಡಾದ ‘ಅರಗಿಣಿಯೇ’ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಸಂಗೀತ ಪ್ರಿಯರ ಗಮನ ಸೆಳೆಯುತ್ತಿದೆ.

ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಮನಮೋಹಕ ಸಂಗೀತ ಸಂಯೋಜನೆ ನೀಡಿದ್ದಾರೆ. ಗಾಯನದಲ್ಲಿ ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಹಾಗೂ ಜನಪ್ರಿಯ ಗಾಯಕ ಕಪಿಲ್ ಕಪಿಲನ್ ಅವರು ಧ್ವನಿ ನೀಡಿದ್ದಾರೆ. ಇವರಿಬ್ಬರ ಸುಮಧುರ ಗಾಯನ ಹಾಡಿಗೆ ಹೊಸ ಆಯಾಮವನ್ನು ನೀಡಿದೆ.

ಹಾಡಿನ ಸಾಹಿತ್ಯವನ್ನು ಧನಂಜಯ ರಂಜನ್ ಅವರು ರಚಿಸಿದ್ದು, ಪದಗಳ ಸರಳತೆ ಮತ್ತು ಭಾವನಾತ್ಮಕ ಆಳತೆ ಶ್ರೋತೃಗಳನ್ನು ಸೆಳೆಯುವಂತಿದೆ. ಪ್ರೀತಿಯ ಭಾವನೆಗಳನ್ನು ಸುಂದರವಾಗಿ ಮೂಡಿಸುವ ಈ ಗೀತೆ ಚಿತ್ರದ ಮೇಲೆ ಉತ್ತಮ ನಿರೀಕ್ಷೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande