ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿ
ಚಿತ್ರದುರ್ಗ, 14 ಜನವರಿ (ಹಿ.ಸ.) : ಆ್ಯಂಕರ್ : ಸರ್ಕಾರದ ಆದೇಶದಂತೆ 2025-26 ರ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋನೆಯಡಿಯಲ್ಲಿ ಮೆಕ್ಕೆಜೋಳವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಏಕೀಕೃತ ವೇದಿಕೆಯಡಿಯಲ್ಲಿ ರೈತರು ಮಾರಾಟ ಮಾಡಬಹುದಾಗಿದ್ದು, ಈ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ 2,1
ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿ


ಚಿತ್ರದುರ್ಗ, 14 ಜನವರಿ (ಹಿ.ಸ.) :

ಆ್ಯಂಕರ್ : ಸರ್ಕಾರದ ಆದೇಶದಂತೆ 2025-26 ರ ಮುಂಗಾರು ಹಂಗಾಮಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋನೆಯಡಿಯಲ್ಲಿ ಮೆಕ್ಕೆಜೋಳವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಏಕೀಕೃತ ವೇದಿಕೆಯಡಿಯಲ್ಲಿ ರೈತರು ಮಾರಾಟ ಮಾಡಬಹುದಾಗಿದ್ದು, ಈ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ 2,150/- ರೂ. ನಿಗದಿಪಡಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ರೈತರಿಂದ ಮೆಕ್ಕೆಜೋಳ ಖರೀದಿಸಲು ಜಿಲ್ಲೆಯ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು ತಾಲ್ಲೂಕು ರಾಂಪುರ ದಲ್ಲಿನ ಎ.ಪಿ.ಎಂ.ಸಿ.ಯಲ್ಲಿ ಖರೀದಿ ಕೇಂದ್ರಗಳಲ್ಲಿ ನೊಂದಣಿ ಕಾರ್ಯ ಪ್ರಾರಂಭಿಸಲಾಗಿದೆ.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ವಿಸ್ತೀರ್ಣ ಉತ್ಪಾದನೆ ಆಧಾರದ ಮೇಲೆ 2.17 ಲಕ್ಷ ಕ್ಕಿಂಟಲ್ ಗರಿಷ್ಠ ಪ್ರಮಾಣದಂತೆ ಖರೀದಿಸಲು ಆದೇಶ ನೀಡಲಾಗಿರುತ್ತದೆ. ಇದರನ್ವಯ ಎಫ್.ಎ.ಕ್ಯೂ. ಗುಣಮಟ್ಟದ ಮೆಕ್ಕೆಜೋಳವನ್ನು ಮಾರುಕಟ್ಟೆಗೆ ತರಲು ರೈತರಿಗೆ ಸೂಚಿಸಲಾಗಿದೆ.

ರೈತರು ಮೆಕ್ಕೆಜೋಳವನ್ನು ಇ ಮತ್ತು ಎಫ್. ಬ್ಲಾಕ್ ಗೇಟಿನಲ್ಲಿ ತಂದು ಗೇಟ್ ಎಂಟ್ರಿ ಮಾಡಿಸಬೇಕು. ಮೆಕ್ಕೆಜೋಳದ ಮಾದರಿ ಧಾರಣೆ ಏನೇ ಇದ್ದರೂ ಪ್ರತಿ ಕ್ವಿಂಟಾಲ್‍ಗೆ ಗರಿಷ್ಠ ರೂ.250/-ರಂತೆ ಸರ್ಕಾರದಿಂದ ವ್ಯತ್ಯಾಸ ಬೆಲೆ ಪಾವತಿಸಲಾಗುವುದು.

ಈ ಯೋಜನೆಯಡಿ ಪ್ರತಿ ರೈತರಿಂದ 50 ಕ್ವಿಂಟಾಲ್ ಗೆ ಮಿತಿಗೊಳಿಸಿ ವ್ಯತ್ಯಾಸ ಮೊತ್ತ ಖಾತೆಗೆ ರೈತರಿಗೆ ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗುತ್ತದೆ.

ವ್ಯತ್ಯಾಸ ಮೊತ್ತದ ಪಾವತಿ: ಮಾರುಕಟ್ಟೆ ಧಾರಣೆ ರೂ. 1,900 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟವಾದರೆ ಪ್ರತಿ ಕ್ವಿಂಟಲ್‍ಗೆ ಗರಿಷ್ಠ ರೂ.250, ಮಾರುಕಟ್ಟೆ ಧಾರಣೆ ರೂ. 1,950 ರಂತೆ ಮಾರಾಟವಾದಲ್ಲಿ ವ್ಯತ್ಯಾಸದ ಮೊತ್ತ ರೂ.200 ಪಾವತಿಸಲಾಗುವುದು. ರೈತರ ಮೆಕ್ಕೆಜೋಳ ರೂ. 2,150/- ಅಥವಾ ಅದಕ್ಕಿಂತ ಹೆಚ್ಚಿಗೆ ಮಾರಾಟವಾದಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ.

ರೈತರು ಫ್ರೂಟ್ ಐಡಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ತಂದು ನೊಂದಣಿ ಮಾಡಿಕೊಳ್ಳಬೇಕು.

ನಂತರ ಮೆಕ್ಕೆಜೋಳವನ್ನು ಮಾರುಕಟ್ಟೆಯಲ್ಲಿ ಇ-ಟೆಂಡರ್ ಇರುವ ಮಾರುಕಟ್ಟೆ, ದಿನದಂದು ಗೇಟ್ ಎಂಟ್ರಿ ಮಾಡಿಸಿಕೊಂಡು ಮಾರುಕಟ್ಟೆಗೆ ತರಬೇಕು.

ಪಿ.ಎ.ಸಿ.ಎಸ್ ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳಲ್ಲಿಯೂ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2026ರ ಫೆಬ್ರವರಿ 7 ರವರೆಗೆ ಕಾಲಾವಕಾಶ ನೀಡಿದ್ದು, ಅರ್ಹ ರೈತರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande