
ಗದಗ, 14 ಜನವರಿ (ಹಿ.ಸ.) :
ಆ್ಯಂಕರ್ : 2025-26ನೇ ಸಾಲಿನಲ್ಲಿ ಖಾಲಿ ಇರುವ ಸ್ಥಾನಗಳಿಗೆ ಶಿರಹಟ್ಟಿ ಪಟ್ಟಣದ ವ್ಯಾಪ್ತಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ಅರ್ಹ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ, ಹಾಗೂ ಇತರೇ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ವಸತಿ ನಿಲಯ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ವೆಬ್‌ಸೈಟನಲ್ಲಿ ನೋಂದಣಿ ಮಾಡಿಕೊಂಡು ನಂತರ ಲಾಗಿನ್‌ಐಡಿ ಹಾಗೂ ಪಾಸ್‌ವರ್ಡ ಬಳಸಿ ಕೆವೈಸಿ ಮುಖಾಂತರ ವಸತಿ ನಿಲಯಕ್ಕೆಅರ್ಜಿ ಸಲ್ಲಿಸುವುದು ಹಾಗೂ ಸಲ್ಲಿಸಿದ ಅರ್ಜಿಯನ್ನು ಪ್ರಿಂಟ್‌ತೆಗೆದುಕೊಂಡು ಈ ಕೆಳಕಂಡ ದಾಖಲೆಗಳನ್ನು ಲಗತ್ತಿಸಿ ಸಂಬಂಧಿಸಿದ ಕಾಲೇಜಿನ ಪ್ರಾಚಾರ್ಯರಿಂದ ದೃಢೀಕರಿಸಿ ಈ ಕಾರ್ಯಾಲಯಕ್ಕೆಅರ್ಜಿ ಸಲ್ಲಿಸಲು ಈ ಮೂಲಕ ಪ್ರಕಟಿಸಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಸೀಟುಗಳ ಲಭ್ಯತೆಯನುಸಾರ ಪ್ರವೇಶಒದಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಶಿರಹಟ್ಟಿ ಕಾರ್ಯಾಲಯಕ್ಕೆ ಸಂಪರ್ಕಿಸಲು ಸೂಚಿಸಿದೆ. ಹಾಗೂ ದೂರವಾಣಿ ಸಂಖ್ಯೆ : 0847-295097, 94808 43132 ಇಲ್ಲಿಗೆ ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ.
ಅರ್ಜಿಗಳೊಂದಿಗೆ ಸಲ್ಲಿಸಬೇಕಾದ ದಾಖಲೆಗಳು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ. (ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಸಹಿಯೊಂದಿಗೆ) , ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ. (ಝರಾಕ್ಸ ಪ್ರತಿ), ವಿದ್ಯಾರ್ಥಿಗಳ ಆಧಾರಕಾರ್ಡ (ಝರಾಕ್ಸ ಪ್ರತಿ), ಆದಾಯ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ), ವಿದ್ಯಾರ್ಥಿ / ವಿದ್ಯಾರ್ಥಿನಿಯ ಬ್ಯಾಂಕ್ ಪಾಸ್ ಪುಸ್ತಕ (ಝರಾಕ್ಸ್ ಪ್ರತಿ) , ರೇಷನಕಾರ್ಡ(ಝರಾಕ್ಸ್ ಪ್ರತಿ) ವಿದ್ಯಾರ್ಥಿಗಳ 2 ಪಾಸ್‌ಪೋರ್ಟ ಅಳತೆಯ ಭಾವಚಿತ್ರ, ವಿದ್ಯಾರ್ಥಿಗಳ ಹಿಂದಿನ ತರಗತಿಯಅಂಕಪಟ್ಟಿ ಪ್ರತಿ. (ಝರಾಕ್ಸ್ ಪ್ರತಿ), ವಿದ್ಯಾರ್ಥಿ / ವಿದ್ಯಾರ್ಥಿನಿಯ / ಪಾಲಕರ ಮೋಬೈಲ್ ನಂಬರ.
ಹಿಂದೂಸ್ತಾನ್ ಸಮಾಚಾರ್ / lalita MP