
ಗದಗ, 14 ಜನವರಿ (ಹಿ.ಸ.) :
ಆ್ಯಂಕರ್ : ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡೆಯೂರಪ್ಪ ಅವರ ಅಧ್ಯಕ್ಷತೆಯಲ್ಲಿ,ರಾಜ್ಯ ಬಿಜೆಪಿ ಕೋರ ಕಮೀಟಿ ಸದಸ್ಯರ ಸಮ್ಮುಖದಲ್ಲಿ ಗದಗ ಜಿಲ್ಲಾ ಸಂಘಟನಾ ಸಭೆಯು ಜರುಗಿತು.
ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು ಬಿ ಎಸ್ ಯಡೆಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಹಾಲಿ ಸಂಸದರು ಬಸವರಾಜ ಬೊಮ್ಮಯಿ, ಜಗದೀಶ ಶಟ್ಟರ, ಶಾಸಕರಾದ ಸಿ ಸಿ ಪಾಟೀಲ, ಡಾ ಚಂದ್ರು ಲಮಾಣಿ, ಎಸ್ ವಿ ಸಂಕನೂರ,ಮಾಜಿ ಸಚಿವರಾದ ಕಳಕಪ್ಪ ಬಂಡಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷರು ಎಮ್ ಎಸ್ ಕರಿಗೌಡ್ರ, ಜಿಲ್ಲಾ ಅಧ್ಯಕ್ಷರಾದ ರಾಜು ಕುರಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಪಾಟೀಲ, ಆರ್ ಕೆ ಚವಾಣ್, ಪಕ್ಕೀರೇಶ ರಟ್ಟೀಹಳ್ಳಿ, ಮಂಡಲ ಅಧ್ಯಕ್ಷರಾದ ಸುನೀಲ್ ಮಹಾಂತಶೆಟ್ಟರ್, ಅಂದಪ್ಪ ಹಾರೂಗೇರಿ, ಉಮೇಶ ಮಲ್ಲಾಪೂರ, ಬೂದಪ್ಪ ಹಳ್ಳಿ, ಸುರೇಶ ಮರಳಪ್ಪನವರು ಭಾಗವಹಿಸಿದ್ದರು. ಪಕ್ಷದ ಸಂಘಟನೆ ಕುರಿತಂತೆ ವಿಸ್ತೃತ ಸಮಾಲೋಚನೆ ನಡೆಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / lalita MP