ಆಹಾರ ಸುರಕ್ಷತಾ ಅಭಿಯಾನ “ಕಲಬೆರಕೆ ತಡೆಗೆ-ನಮ್ಮ ನಡಿಗೆ”
ಶಿವಮೊಗ್ಗ, 14 ಜನವರಿ (ಹಿ.ಸ.) : ಆ್ಯಂಕರ್ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿರುವುದು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿರುವ ಹಿನ್ನಲೆಯಲ್ಲಿ, ಸುರಕ್ಷಿತ, ಶುದ್ಧ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ಒದಗಿಸುವ
ಆಹಾರ ಸುರಕ್ಷತಾ ಅಭಿಯಾನ “ಕಲಬೆರಕೆ ತಡೆಗೆ-ನಮ್ಮ ನಡಿಗೆ”


ಶಿವಮೊಗ್ಗ, 14 ಜನವರಿ (ಹಿ.ಸ.) :

ಆ್ಯಂಕರ್ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಹೆಚ್ಚುತ್ತಿರುವುದು ಜನರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿರುವ ಹಿನ್ನಲೆಯಲ್ಲಿ, ಸುರಕ್ಷಿತ, ಶುದ್ಧ ಹಾಗೂ ಗುಣಮಟ್ಟದ ಆಹಾರವನ್ನು ಜನರಿಗೆ ಒದಗಿಸುವ ಉದ್ದೇಶದಿಂದ ಕಲಬೆರಕೆ ತಡೆಗೆ - ನಮ್ಮ ನಡಿಗೆ ಆಹಾರ ಸುರಕ್ಷತಾ ಅಭಿಯಾನ - 2026 ಅನ್ನು ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದ ಮೂಲಕ ಆಹಾರ ಕಲಬೆರಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಆಹಾರ ಸುರಕ್ಷತಾ ಕಾಯ್ದೆ-2006ರ ಮಹತ್ವವನ್ನು ತಿಳಿಸುವುದರ ಜೊತೆಗೆ, ಸುರಕ್ಷಿತ ಆಹಾರದ ಬಳಕೆಯನ್ನು ಉತ್ತೇಜಿಸುವುದು ಮುಖ್ಯ ಗುರಿಯಾಗಿದೆ. ಜನಸಾಮಾನ್ಯರ ಸಹಕಾರದೊಂದಿಗೆ ಶುದ್ಧ ಆಹಾರ ಸಂಸ್ಕೃತಿಯನ್ನು ಬೆಳೆಸಿ, ಉತ್ತಮ ಆರೋಗ್ಯಯುತ ಸಮಾಜ ನಿರ್ಮಿಸುವುದೇ ಈ ಅಭಿಯಾನದ ಆಶಯವಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅನ್ವಯ ಆಹಾರ ವಸ್ತುಗಳ ಉತ್ಪಾದನೆ ಸಂಸ್ಕರಣೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಣ್ಣ ಮಧ್ಯಮ ಪರಮಾಣದ ಉತ್ಪಾದಕರು, ಬೀದಿ ಬದಿ ಆಹಾರ ವಸ್ತುಗಳ ವ್ಯಾಪಾರಿಗಳು, ಪಾಸ್ಟ್ ಫುಡ್ ಕೇಂದ್ರಗಳು, ಬೇಕರಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್, ಜ್ಯೂಸ್ ಸೆಂಟರ್, ಐಸ್ ಕ್ರೀಮ್ ಹಾಗೂ ಕಾಂಡಿಮೆಂಟ್ಸ್ ಮಾಲೀಕರುಗಳು ಇಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

ಆಹಾರ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮಾಡುವವರು ಕಡ್ಡಾಯವಾಗಿ FSSAI ನ ನೊಂದಣಿ/ಪರವಾನಿಗೆಯನ್ನು ಹೊಂದಿರಬೇಕಾಗಿರುವುದು ಕಡ್ಡಾಯ. ನಿಷೇಧಿತ ಕೃತಕ ಬಣ್ಣಗಳು ಮತ್ತು ಹಾನಿಕಾರಕ ರಸಾಯನಿಕ ವಸ್ತುಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಬಾರದು. ಆಹಾರ ತಯಾರಿಕೆಯಲ್ಲಿ ಕೃತಕ ರುಚಿಕಾರಕಗಳನ್ನು (ಎಂಎಸ್‌ಜಿ/ಟೆಸ್ಟಿಂಗ್ ಪೌಂಡರ್) ಬಳಕೆ ಮಾಡಬಾರದು. ಕಳಪೆ ಗುಣಮಟ್ಟದ, ಕಲಬೆರಕೆಯಾಗಿರುವ, ಹಾನಿಕಾರಕ ಆಹಾರ ವಸ್ತುಗಳ ತಯಾರಿಕೆ ದಾಸ್ತಾನು ವಿತರಣೆ ಮತ್ತು ಮಾರಾಟ ಮಾಡುವಂತಿಲ್ಲ.

ಅವಧಿ ಮೀರಿದ ಆಹಾರ ಪದಾರ್ಥಗಳು ಮತ್ತು ಅವಧಿ ಮುಗಿಯುವ ದಿನಾಂಕ ಹೊಂದಿರದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು. ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡುವ ಮೂಲಕ ಆಹಾರ ವಸ್ತುಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ಮಾಡಬಾರದು. ಆಹಾರ ಪದಾರ್ಥಗಳನ್ನು ಅನಾರೋಗ್ಯಕರ ಮತ್ತು ಅನೈರ್ಮಲ್ಯಕರ ವಾತಾವರಣದಲ್ಲಿ ಸಂಸ್ಕರಿಸುವುದು ಮತ್ತು ತಯಾರಿಸುವುದು ನಿಷೇಧಿಸಲಾಗಿದೆ. ಆಹಾರ ತಯಾರಿಕೆ ಸಂಸ್ಕರಣೆಯಲ್ಲಿ ಶುದ್ದಿಕರಿಸಿದ ನೀರುನ್ನು ಬಳಕೆ ಮಾಡಬೇಕು. ಕಲಬೆರಕೆ ಕಾರಕ ವಸ್ತುಗಳನ್ನು ಆಹಾರ ತಯಾರಿಕಾ ಸ್ಥಳದಲ್ಲಿ ಹೊಂದಿರಬಾರದು. ಆಹಾರ ತಯಾರಿಕೆ, ಸಂಸ್ಕರಣೆಯಲ್ಲಿ ಶುದ್ಧವಾದ ನೀರನ್ನು ಬಳಕೆ ಮಾಡಬೇಕು. ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ/ಪಟ್ಟಣ ಅಥವಾ ಗ್ರಾಮ ಪಂಚಾಯಿತಿಯ ವ್ಯಾಪಾರೋಧ್ಯಮ ಪರವಾನಿಗೆ ಹೊಂದಿರಬೇಕಾಗಿರುವುದು ಕಡ್ಡಾಯ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ.

ಇವೇ ಮೊದಲಾದ ಉಪಬಂಧಗಳಿಗೆ ಸಂಬಂಧಪಟ್ಟಂತೆ ಆಹಾರ ವಸ್ತಗಳ ಉತ್ಪಾದನೆ, ಸಂಸ್ಕರಣ ಮತ್ತು ಮಾರಾಟ ವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿ ಮತ್ತು ಸಂಸ್ಥೆಗಳು ಈ ಮೇಲ್ಕಂಡ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅಂತಹ ಅಪರಾಧಗಳಿಗೆ ಗರಿಷ್ಟ 05 ಲಕ್ಷದವರೆಗೆ ದಂಡ ಮತ್ತು ಗರಿಷ್ಟ 03 ವರ್ಷಗಳವರೆಗೆ ಕಾರಗೃಹ ವಾಸ ಮತ್ತು ಈ ಎರಡು ದಂಡನೆಗಳಿಗೆ ಗುರಿಮಾಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರನ್ವಯ ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ರೀತಿಯ ಆಹಾರ ವಸ್ತು ಪ್ರವರ್ತಕರುಗಳಿಗೆ ಈ ಮೂಲಕ ಸಾರ್ವಜನಿಕ ತಿಳುವಳಿಕೆ ನೀಡಲಾಗಿದೆ.

ಈ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ ಸಾರ್ವಜನಿಕರು, ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಕಛೇರಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳನ್ನು ಹಾಗೂ ಟೋಲ್ ಫ್ರೀ ನಂ.080-22270035 ಅನ್ನು ಅಥವಾ ಆರೋಗ್ಯ ನೀರಿಕ್ಷಕರು/ ಮಹಾನಗರ ಪಾಲಿಕೆ/ ಆಹಾರ ನೀರಿಕ್ಷಕರು/ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರನ್ನು ಸಂಪರ್ಕಿಸಲು ಕೋರಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande