ಕ್ರೀಡಾ ಕ್ಷೇತ್ರದ ಸಾಧಕರ ಸನ್ಮಾನಕ್ಕಾಗಿ ಅರ್ಜಿ ಆಹ್ವಾನ
ಧಾರವಾಡ, 14 ಜನವರಿ (ಹಿ.ಸ.) ಆ್ಯಂಕರ್: ಜನವರಿ 26, 2026 ರಂದು ಜರುಗಲಿರುವ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ 2025 ನೇ ಕ್ಯಾಲೇಂಡರ ವರ್ಷದ (ದಿನಾಂಕ:01-01-2025 ರಿಂದ 31-12-2025 ರ ವರೆಗೆ) ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕ ವಿಜೇತ ಹಾಗೂ
ಕ್ರೀಡಾ ಕ್ಷೇತ್ರದ ಸಾಧಕರ ಸನ್ಮಾನಕ್ಕಾಗಿ ಅರ್ಜಿ ಆಹ್ವಾನ


ಧಾರವಾಡ, 14 ಜನವರಿ (ಹಿ.ಸ.)

ಆ್ಯಂಕರ್:

ಜನವರಿ 26, 2026 ರಂದು ಜರುಗಲಿರುವ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ 2025 ನೇ ಕ್ಯಾಲೇಂಡರ ವರ್ಷದ (ದಿನಾಂಕ:01-01-2025 ರಿಂದ 31-12-2025 ರ ವರೆಗೆ) ರಾಷ್ಟ್ರಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕ ವಿಜೇತ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಗುವುದು.

ಆಸಕ್ತ ವಿಶೇಷ ಸಾಧನೆಗೈದ ಸಾಧಕರು (ಈ ಹಿಂದೆ ಸನ್ಮಾನಿಸಲ್ಪಟ್ಟ ಸಾಧಕರನ್ನು ಹೊರತುಪಡಿಸಿ) ಜನವರಿ 19, 2026 ರೊಳಗಾಗಿ ಎಲ್ಲ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2447424 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande