ಕಠೋಪನಿಷತ್ತಿನ ವಚನ ಉಲ್ಲೇಖಿಸಿದ ಪ್ರಧಾನಿ ಮೋದಿ
ನವದೆಹಲಿ, 13 ಜನವರಿ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಯುವಜನತೆಗೆ ಸ್ಫೂರ್ತಿದಾಯಕ ಸಂದೇಶ ನೀಡುತ್ತ, ಕಠೋಪನಿಷತ್ತಿನ ಪ್ರಸಿದ್ಧ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದರು. ಸ್ವಯಂ ಜಾಗೃತಿ, ಕಠಿಣ ಪರಿಶ್ರಮ ಮತ್ತು ಗುರಿಯತ್ತ ನಿರಂತರ ಪ್ರಯತ್ನವೇ ಯಶಸ್ಸಿನ ಮಾರ್ಗವೆಂದು ಪ್ರಧ
Pm


ನವದೆಹಲಿ, 13 ಜನವರಿ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಯುವಜನತೆಗೆ ಸ್ಫೂರ್ತಿದಾಯಕ ಸಂದೇಶ ನೀಡುತ್ತ, ಕಠೋಪನಿಷತ್ತಿನ ಪ್ರಸಿದ್ಧ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದರು. ಸ್ವಯಂ ಜಾಗೃತಿ, ಕಠಿಣ ಪರಿಶ್ರಮ ಮತ್ತು ಗುರಿಯತ್ತ ನಿರಂತರ ಪ್ರಯತ್ನವೇ ಯಶಸ್ಸಿನ ಮಾರ್ಗವೆಂದು ಪ್ರಧಾನಿ ತಮ್ಮ ಸಂದೇಶದಲ್ಲಿ ಹೇಳಿದರು.

ಪ್ರಧಾನಿಯವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಕಠೋಪನಿಷತ್ತಿನ ಈ ಶ್ಲೋಕವನ್ನು ಹಂಚಿಕೊಂಡಿದ್ದಾರೆ.

“ಉತ್ತಿಷ್ಠತ, ಜಾಗ್ರತ, ಪ್ರಾಪ್ಯ ವರಾನ್ನಿಬೋಧತ”

(ಎದ್ದೇಳಿ, ಎಚ್ಚರಗೊಳ್ಳಿ ಮತ್ತು ನಿಮಗೆ ದೊರೆತ ವರಗಳನ್ನು ಅರಿತುಕೊಳ್ಳಿ.)

ಈ ಶ್ಲೋಕದ ಸಾರಾಂಶವನ್ನು ವಿವರಿಸಿದ ಪ್ರಧಾನಿ, ಜೀವನದಲ್ಲಿ ಉದಾತ್ತ ಗುರಿಯನ್ನು ಸಾಧಿಸುವ ಸಂಕಲ್ಪದೊಂದಿಗೆ ಏಳುವುದು, ಎಚ್ಚರಗೊಳ್ಳುವುದು ಮತ್ತು ಜ್ಞಾನೋದಯವನ್ನು ಪಡೆಯುವುದೇ ಇದರ ಅರ್ಥ ಎಂದು ಹೇಳಿದ್ದಾರೆ. ಈ ಪಥ ಸುಲಭವಲ್ಲ; ಅದು ಕಠಿಣವಾದರೂ ಅತ್ಯುನ್ನತವಾದ ಮಾರ್ಗವಾಗಿದ್ದು, ಇದೇ ದಾರಿಯಲ್ಲಿ ಸಾಗುವುದರಿಂದ ಯಶಸ್ಸು ಮತ್ತು ಆತ್ಮಸಾಕ್ಷಾತ್ಕಾರವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಯುವಜನರು ಸವಾಲುಗಳಿಗೆ ಹೆದರಬಾರದು, ಬದಲಾಗಿ ಶಿಸ್ತು, ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳ ಮೂಲಕ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದರು. ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ನಿರ್ಣಾಯಕವಾಗಿದ್ದು, ಇಂತಹ ಸ್ಫೂರ್ತಿದಾಯಕ ಆಲೋಚನೆಗಳು ಅವರನ್ನು ಮುನ್ನಡೆಯ ದಾರಿಯಲ್ಲಿ ಶಕ್ತಿಮಂತರನ್ನಾಗಿಸುತ್ತವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande