ಪ್ರಯಾಗರಾಜ್ ಮಾಘ ಮೇಳ ; ವಾಹನ ಸಂಚಾರ ನಿರ್ಬಂಧ
ಪ್ರಯಾಗರಾಜ್, 13 ಜನವರಿ (ಹಿ.ಸ.) : ಆ್ಯಂಕರ್ : ಪ್ರಯಾಗರಾಜ್‌ನ ಸಂಗಮದಲ್ಲಿ ನಡೆಯುತ್ತಿರುವ ವಿಶ್ವವಿಖ್ಯಾತ ಮಾಘ ಮೇಳದ ಪ್ರಮುಖ ಸ್ನಾನ ಪರ್ವಗಳಾದ ಮಕರ ಸಂಕ್ರಾಂತಿ (ಜನವರಿ 15) ಹಾಗೂ ಮೌನಿ ಅಮಾವಾಸ್ಯೆ (ಜನವರಿ 18) ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕಠಿಣ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.
Maga mela


ಪ್ರಯಾಗರಾಜ್, 13 ಜನವರಿ (ಹಿ.ಸ.) :

ಆ್ಯಂಕರ್ : ಪ್ರಯಾಗರಾಜ್‌ನ ಸಂಗಮದಲ್ಲಿ ನಡೆಯುತ್ತಿರುವ ವಿಶ್ವವಿಖ್ಯಾತ ಮಾಘ ಮೇಳದ ಪ್ರಮುಖ ಸ್ನಾನ ಪರ್ವಗಳಾದ ಮಕರ ಸಂಕ್ರಾಂತಿ (ಜನವರಿ 15) ಹಾಗೂ ಮೌನಿ ಅಮಾವಾಸ್ಯೆ (ಜನವರಿ 18) ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕಠಿಣ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಜನವರಿ 13ರ ಸಂಜೆ 8 ಗಂಟೆಯಿಂದ ಜನವರಿ 19ರ ಮಧ್ಯರಾತ್ರಿ ಅಥವಾ ಜನಸಂದಣಿ ತಗ್ಗುವವರೆಗೆ ಸಂಪೂರ್ಣ ಮೇಳ ಪ್ರದೇಶವನ್ನು ವಾಹನ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ.

ಪೊಲೀಸ್ ಅಧೀಕ್ಷಕ ನೀರಜ್ ಪಾಂಡೆ ಅವರು, ಆಡಳಿತ ಹಾಗೂ ವೈದ್ಯಕೀಯ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಖ್ಯ ಸ್ನಾನ ಪರ್ವಗಳ ದಿನ ಅಕ್ಷಯವಟ ದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಭಕ್ತರು ತಮ್ಮ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ಪಾದಚಾರಿಯಾಗಿ ಮಾತ್ರ ಸಂಗಮ ಸ್ನಾನಘಾಟಗಳಿಗೆ ತೆರಳಬೇಕು. ಪರೇಡ್, ಝೂನ್ಸಿ, ಅರೈಲ್ ಸೇರಿದಂತೆ ವಿವಿಧ ದಿಕ್ಕುಗಳಿಂದ ಬರುವ ಭಕ್ತರಿಗೆ ಪ್ರತ್ಯೇಕ ಪಾರ್ಕಿಂಗ್ ಮತ್ತು ಪಾದಚಾರಿ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ.

ಪಾಂಟೂನ್ ಸೇತುವೆಗಳ ಮೇಲೆ ಏಕ ಮುಖ ಸಂಚಾರ ವ್ಯವಸ್ಥೆ ಜಾರಿಯಲ್ಲಿದ್ದು, ಕೆಲವು ಸೇತುವೆಗಳನ್ನು ತುರ್ತು ಪರಿಸ್ಥಿತಿಗೆ ಕಾಯ್ದಿರಿಸಲಾಗಿದೆ. ಎಲ್ಲಾ ಸಂಗಮ ಸ್ನಾನಘಾಟಗಳ ಬಳಿ ವಾಹನ ತರುವುದಕ್ಕೂ ಪಾರ್ಕಿಂಗ್ ಮಾಡುವುದಕ್ಕೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande