ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್, ಮಾಘ ಬಿಹು ; ರಾಷ್ಟ್ರಪತಿ ಸೇರಿ ಗಣ್ಯರ ಶುಭಾಶಯ
ನವದೆಹಲಿ, 13 ಜನವರಿ (ಹಿ.ಸ.) : ಆ್ಯಂಕರ್ : ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಹಾಗೂ ಮಾಘ ಬಿಹು ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕೇಂದ್ರ ಸಚಿವರು ದೇಶದ ಜನತೆಗೆ ಹಾರ್ದ
Greetings


ನವದೆಹಲಿ, 13 ಜನವರಿ (ಹಿ.ಸ.) :

ಆ್ಯಂಕರ್ : ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಹಾಗೂ ಮಾಘ ಬಿಹು ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕೇಂದ್ರ ಸಚಿವರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ ಮೂಲಕ ಶುಭಾಶಯ ಸಂದೇಶಗಳನ್ನು ಹಂಚಿಕೊಂಡಿರುವ ನಾಯಕರು, ಈ ಹಬ್ಬಗಳು ಭಾರತದ ಶ್ರೀಮಂತ ಕೃಷಿ ಪರಂಪರೆ, ಪ್ರಕೃತಿಯೊಂದಿಗೆ ಮಾನವನ ಅವಿಭಾಜ್ಯ ಸಂಬಂಧ ಹಾಗೂ ರಾಷ್ಟ್ರೀಯ ಏಕತೆಯ ಪ್ರತೀಕಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲರ ಜೀವನದಲ್ಲೂ ಸಂತೋಷ, ಸಮೃದ್ಧಿ, ಶಾಂತಿ ಮತ್ತು ನವೀನ ಶಕ್ತಿಯನ್ನು ಈ ಹಬ್ಬಗಳು ತರಲಿ ಎಂದು ಅವರು ಹಾರೈಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ವಿಶ್ವದಾದ್ಯಂತ ಇರುವ ಭಾರತೀಯರಿಗೆ ಲೋಹ್ರಿ, ಮಕರ ಸಂಕ್ರಾಂತಿ, ಪೊಂಗಲ್ ಹಾಗೂ ಮಾಘ ಬಿಹು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

“ಈ ಹಬ್ಬಗಳು ನಮ್ಮ ಕೃಷಿ ಸಂಸ್ಕೃತಿಯ ಮಹತ್ವವನ್ನು ಸ್ಮರಿಸಿಸುತ್ತವೆ. ಈ ಸಂದರ್ಭದಲ್ಲಿ ನಾವು ಪ್ರಕೃತಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಜೊತೆಗೆ, ದೇಶವನ್ನು ಪೋಷಿಸುವ ರೈತರಿಗೆ ಗೌರವ ಸಲ್ಲಿಸೋಣ. ಈ ಹಬ್ಬಗಳು ಪ್ರತಿಯೊಬ್ಬರ ಬದುಕಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ” ಎಂದು ಅವರು ಆಶಿಸಿದರು.

ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರು, “ಎಳ್ಳು–ಬೆಲ್ಲದ ಮಾಧುರ್ಯ, ಡೋಲುಗಳ ಗದ್ದಲ, ಗಿಡ್ಡ ಮತ್ತು ಭಾಂಗ್ರಾದ ಉತ್ಸಾಹದೊಂದಿಗೆ ಲೋಹ್ರಿ ಹಬ್ಬವು ನಿಮ್ಮ ಜೀವನಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ” ಎಂದು ಶುಭ ಹಾರೈಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಲೋಹ್ರಿಯನ್ನು ಉತ್ಸಾಹ ಮತ್ತು ನವಶಕ್ತಿಯ ಸಂಕೇತವೆಂದು ವರ್ಣಿಸಿ, ಈ ಹಬ್ಬವು ಎಲ್ಲರ ಬದುಕಿಗೂ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಎಂದು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಈ ಸಂತೋಷದ ಹಬ್ಬಗಳು ದೇಶದ ಜನರ ಜೀವನದಲ್ಲಿ ಅಪಾರ ಹರ್ಷ ಮತ್ತು ಸಮೃದ್ಧಿಯನ್ನು ತರಲಿ” ಎಂದು ಹಾರೈಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, “ಈ ಶುಭ ಹಬ್ಬಗಳು ಎಲ್ಲರಿಗೂ ಶಾಂತಿ, ಸಂತೋಷ ಹಾಗೂ ಸಕಾರಾತ್ಮಕ ಶಕ್ತಿಯನ್ನು ನೀಡಲಿ” ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande