ಶತಾಯುಷಿ ದೇಶಭಕ್ತೆ ಶ್ರೀಮತಿ ರಾಜಮ್ಮ ನಿಧನ
ನವದೆಹಲಿ, 13 ಜನವರಿ (ಹಿ.ಸ.) : ಆ್ಯಂಕರ್ : ದೇಶಭಕ್ತಿ, ತ್ಯಾಗ ಮತ್ತು ಮೌಲ್ಯಾಧಾರಿತ ಜೀವನದ ಪ್ರತೀಕವಾಗಿದ್ದ ಶ್ರೀಮತಿ ರಾಜಮ್ಮ ಅವರು ಇಂದು ಬೆಳಿಗ್ಗೆ 6:30 ಗಂಟೆಗೆ ವಿಧಿವಶರಾಗಿದ್ದಾರೆ. 106 ವರ್ಷಗಳ ಸುದೀರ್ಘ ಹಾಗೂ ತೃಪ್ತಿಕರ ಜೀವನ ನಡೆಸಿದ ಅವರು, ತಮ್ಮ ಆತ್ಮೀಯರನ್ನು ಬಿಟ್ಟು ಅಗಲಿದ್ದಾರೆ. ಸ
ರಾಜಮ್ಮ


ನವದೆಹಲಿ, 13 ಜನವರಿ (ಹಿ.ಸ.) :

ಆ್ಯಂಕರ್ : ದೇಶಭಕ್ತಿ, ತ್ಯಾಗ ಮತ್ತು ಮೌಲ್ಯಾಧಾರಿತ ಜೀವನದ ಪ್ರತೀಕವಾಗಿದ್ದ ಶ್ರೀಮತಿ ರಾಜಮ್ಮ ಅವರು ಇಂದು ಬೆಳಿಗ್ಗೆ 6:30 ಗಂಟೆಗೆ ವಿಧಿವಶರಾಗಿದ್ದಾರೆ. 106 ವರ್ಷಗಳ ಸುದೀರ್ಘ ಹಾಗೂ ತೃಪ್ತಿಕರ ಜೀವನ ನಡೆಸಿದ ಅವರು, ತಮ್ಮ ಆತ್ಮೀಯರನ್ನು ಬಿಟ್ಟು ಅಗಲಿದ್ದಾರೆ.

ಸ್ವಾತಂತ್ರ್ಯ ಚಳುವಳಿಗೆ ತಮ್ಮ ಸಂಪೂರ್ಣ ಸಂಪತ್ತನ್ನು ಅರ್ಪಿಸಿದ್ದ ಶ್ರೀಮತಿ ರಾಜಮ್ಮ, ಆ ನಂತರ ಜೀವನಪೂರ್ತಿ ಚಿನ್ನದ ಆಭರಣಗಳನ್ನು ಧರಿಸದೆ ತ್ಯಾಗಮಯ ಬದುಕು ನಡೆಸಿದರು. ಅವರ ಈ ಮೌಲ್ಯಮಯ ಜೀವನ ದೃಷ್ಠಿಕೋನವೇ ಅವರ ಸಂತತಿಯನ್ನು ಸಮಾಜಸೇವೆಗೆ ಅರ್ಪಿಸುವಂತೆ ಪ್ರೇರೇಪಿಸಿತು.

ಅವರ ಹಿರಿಯ ಪುತ್ರ ನಾಗರಾಜ್ ಸಂಘ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದು, ಎರಡನೇ ಪುತ್ರ ಮಂಜುನಾಥ್ ಹಾಗೂ ಅವರ ಪತ್ನಿ ಸುಮಾಜಿ ಗೃಹಸ್ಥ ಧರ್ಮವನ್ನು ಶ್ರೇಷ್ಠವಾಗಿ ನಿಭಾಯಿಸುತ್ತಾ ತೃಪ್ತಿಕರ ಜೀವನ ನಡೆಸುತ್ತಿದ್ದಾರೆ. ಪುತ್ರಿ ಶಾಂತಕ್ಕ ಅವರು ರಾಷ್ಟ್ರೀಯ ಸೇವಿಕಾ ಸಮಿತಿಯ ಮುಖ್ಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮತಿ ರಾಜಮ್ಮ ಅವರ ನಿಧನದಿಂದ ಒಂದು ಆದರ್ಶಮಯ ಜೀವನದ ಅಧ್ಯಾಯ ಅಂತ್ಯಗೊಂಡಿದ್ದು, ಅವರ ಆಶೀರ್ವಾದದ ನೆರಳನ್ನು ನಾವು ಕಳೆದುಕೊಂಡಿದ್ದೇವೆ. ದೇವರು ಅವರ ಆತ್ಮಕ್ಕೆ ಮೋಕ್ಷ ನೀಡಲಿ ಹಾಗೂ ಕುಟುಂಬದ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಹಿಂದುಸ್ತಾನ್ ಸಮಾಚಾರ ಸುದ್ದಿ ಸಂಸ್ಥೆಯ ಅಧ್ಯಕ್ಷರಾದ ಅರವಿಂದ್ ಮರಡಿಕರ ಅವರು ಸಂತಾಪ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande