
ಬೆಂಗಳೂರು, 11 ಜನವರಿ (ಹಿ.ಸ.) :
ಆ್ಯಂಕರ್ : ಬಿ ಗುಡ್ ಡು ಗುಡ್–2026 ಅಭಿಯಾನದ ಅಂಗವಾಗಿ ಸಮರ್ಥ ಭಾರತ ಸಂಸ್ಥೆ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮವು ಭಾನುವಾರ ಕಬ್ಬನ್ ಪಾರ್ಕ್ ಗೇಟ್ ಮುಂಭಾಗದಲ್ಲಿ ನಡೆಯಿತು.
ಸಮಾಜದಲ್ಲಿ ಸಕಾರಾತ್ಮಕ ಚಿಂತನೆ ಮತ್ತು ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿವಿಧ ವರ್ಗಗಳ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಅನುಮೋಲ್ ಕಾಮತ್ ಹಾಗೂ ವಿಕ್ರಮ ವಾರಪತ್ರಿಕೆಯ ಸಂಪಾದಕ ರಮೇಶ್ ದೊಡ್ಡಪುರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ವಾಕಥಾನ್‌ಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಸಮಾಜದ ಒಳಿತಿಗಾಗಿ ಇಂತಹ ಜನಸಹಭಾಗಿತ್ವದ ಚಟುವಟಿಕೆಗಳು ಅಗತ್ಯವಿದ್ದು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa