
ಗದಗ, 11 ಜನವರಿ (ಹಿ.ಸ.) :
ಆ್ಯಂಕರ್ : ಗುಜರಾತಿನ ಸೌರಾಷ್ಟ್ರ ಸೋಮನಾಥ ಮಂದಿರದ ಮೇಲೆ ಮಹಮ್ಮದ್ ಗಜ್ನಿ 17 ಬಾರಿ ದಾಳಿ ಮಾಡಿ ಅಪಾರ ಸಂಪತನ್ನು ಲೂಟಿ ಮಾಡಿ, ದೇವಸ್ಥಾನವನ್ನು ಅವನತಿ ಮಾಡಿ 1000 ವರ್ಷ ಆಗಿದ್ದು ಹಾಗೂ ಅದನ್ನು ಮತ್ತೇ ಜೀರ್ಣೋದ್ಧಾರ ಮಾಡಿ 75 ವರ್ಷ ಗಳ ಆದ ಹಿನ್ನೆಲೆಯಲ್ಲಿ ಇಂದು ಗದಗ ನಗರದ ತ್ರಿಕೂಟೇಶ್ವರ ದೇವಸ್ಥಾನಲ್ಲಿ ಗದಗ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ವಿಶೇಶ ಭಜನೆ ಹಾಗೂ ಪೂಜೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ, ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷರಾದ ರಾಜು ಕುರುಡಗಿ, ಶಹರ ಘಟಕ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ಎಮ್.ಎಸ್. ಕರಿಗೌಡ್ರ, ಬಿ.ಎಚ್.ಲದ್ವಾ ವಕೀಲರು, ಜಗನ್ನಾತಸಾ ಬಾಂಡಗೆ, ಲುಕ್ಕಣಸಾ ರಾಜೊಳ್ಳಿ, ನಗರಸಭಾ ಸದಸ್ಯೆ ಶೈಲಾ ಬಾಕಳೆ, ಎಮ್.ಎಮ್.ಹಿರೇಮಠ, ಶ್ರೀಪತಿ ಉಡುಪಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ನಿರ್ಮಲಾ ಕೊಳ್ಳಿ, ಸಿದ್ದು ಪಲ್ಲೆದ, ಸುಧೀರ್ ಕಾಟಿಗಾರ, ಅನಿಲ್ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಮಂಜುನಾಥ ಶಾಂತಗೇರಿ, ಗಂಗಾಧರ ಮೇಲಗಿರಿ, ಸ್ವಾತಿ ಅಕ್ಕಿ, ಅವಿನಾಶ ಹೊನಗುಡಿ, ಆರ್.ಸಿ.ಮೇರವಾಡೆ ಹಾಗೂ ಬಿಜೆಪಿಯ ಇನ್ನೂ ಹಲವಾರು ಪ್ರಮುಖರು ಮುಖಂಡರು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP