ಒಕ್ಕಲುತನವೇ ಸ್ವಾಭಿಮಾನಿ ಬದುಕಿಗೆ ದೊಡ್ಡ ಶಕ್ತಿ : ಡಿ.ಕೆ. ಶಿವಕುಮಾರ್
ಬೆಂಗಳೂರು, 11 ಜನವರಿ (ಹಿ.ಸ.) : ಆ್ಯಂಕರ್ : ಒಕ್ಕಲುತನ ಎಂಬುದು ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿಯಾಗಿದ್ದು, ಶ್ರಮ ಮತ್ತು ನಂಬಿಕೆಯೇ ಯಶಸ್ಸಿನ ಮೂಲಮಂತ್ರ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಉದ್ಯಮಿ ಒ
Dks


ಬೆಂಗಳೂರು, 11 ಜನವರಿ (ಹಿ.ಸ.) :

ಆ್ಯಂಕರ್ : ಒಕ್ಕಲುತನ ಎಂಬುದು ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿಯಾಗಿದ್ದು, ಶ್ರಮ ಮತ್ತು ನಂಬಿಕೆಯೇ ಯಶಸ್ಸಿನ ಮೂಲಮಂತ್ರ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಉದ್ಯಮಿ ಒಕ್ಕಲಿಗ ಎಕ್ಸ್‌ಪೋ–2026” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭೂಮಿಯ ಮಕ್ಕಳಾಗಿರುವ ಒಕ್ಕಲಿಗ ಸಮಾಜದವರು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಅನೇಕರು ಹೊಸ ಉದ್ಯಮಿಗಳಾಗಿ ರೂಪುಗೊಳ್ಳುತ್ತಿದ್ದು, ಹಲವರು ಉದ್ಯಮ ಕ್ಷೇತ್ರದಲ್ಲಿ ಅಪಾರ ಯಶಸ್ಸು ಸಾಧಿಸಿದ್ದಾರೆ. ರಾಜಕಾರಣಕ್ಕೆ ಪ್ರವೇಶಿಸದೇ ಕೂಡ ಬಹುಜನ ತಮ್ಮ ಬದುಕಿನಲ್ಲಿ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ದೇವರು ಯಾರಿಗೂ ವರವನ್ನೂ ಶಾಪವನ್ನೂ ನೀಡುವುದಿಲ್ಲ, ಅವಕಾಶವನ್ನು ಮಾತ್ರ ಕೊಡುತ್ತಾನೆ. ಆ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ಖಂಡಿತ ಸಿಗುತ್ತದೆ. ಉದ್ಯಮದಲ್ಲಿ ಮುಖ್ಯವಾಗಿ ನಂಬಿಕೆ ಬಹಳ ಅಗತ್ಯ. ನಂಬಿಕೆ ಉಳಿಸಿಕೊಂಡಾಗಲೇ ಗ್ರಾಹಕರು ನಿಮ್ಮತ್ತ ಬರುತ್ತಾರೆ ಎಂದು ತಿಳಿಸಿದರು.

ಶಾಲೆ ನಡೆಸುವುದಾಗಲಿ, ಕಟ್ಟಡ ನಿರ್ಮಾಣವಾಗಲಿ, ಎಲೆಕ್ಟ್ರಿಕ್ ಕೆಲಸವಾಗಲಿ ಅಥವಾ ಯಾವುದೇ ಉದ್ಯಮ ಮಾಡಿದರೂ ಗ್ರಾಹಕರಿಗೆ ನಿಮ್ಮ ಮೇಲೆ ನಂಬಿಕೆ ಇರಬೇಕು. ನಂಬಿಕೆಯೇ ಉದ್ಯಮದ ಆಧಾರಶಿಲೆ ಎಂದು ಅವರು ಹೇಳಿದರು.

ಉದ್ಯಮಿಗಳು ಸರ್ಕಾರಕ್ಕೂ ಸಹಾಯ ಮಾಡುತ್ತಿದ್ದಾರೆ, ಉದ್ಯೋಗಿಗಳನ್ನು ಪೋಷಿಸುತ್ತಿದ್ದಾರೆ ಮತ್ತು ನಿಮ್ಮನ್ನು ನಂಬಿರುವ ಅನೇಕ ಜನರ ಬದುಕಿಗೂ ಆಧಾರವಾಗಿದ್ದಾರೆ. ಅಪಾರ ಶ್ರಮದ ಮೂಲಕ ಯಶಸ್ಸು ಗಳಿಸುತ್ತಿರುವ ಎಲ್ಲಾ ಉದ್ಯಮಿಗಳಿಗೆ ನನ್ನ ಹಾರೈಕೆಗಳು. ನಿಮ್ಮ ಎಲ್ಲಾ ಉದ್ಯಮಗಳು ಯಶಸ್ವಿಯಾಗಲಿ ಎಂದು ಡಿ.ಕೆ. ಶಿವಕುಮಾರ್ ಶುಭ ಕೋರಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande