
ಬೀದರ್, 11 ಜನವರಿ (ಹಿ.ಸ.) :
ಆ್ಯಂಕರ್ : ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ರವರ ತಂದೆಯವರಾದ ಭೀಮಣ್ಣ ಖಂಡ್ರೆ ರವರು ಅನಾರೋಗ್ಯ ಕಾರಣದಿಂದ ಬೀದರ್ ನಗರದ ಬುಡಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಅವರ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಆಂಜನೇಯ ಹಾಗೂ ಮಾಜಿ ಸಂಸದರಾದ ಚಂದ್ರಪ್ಪ, ಶಿವಪ್ಪ, ಬಿ ಕೆ, ಜಯಕುಮಾರ್ ಜಿ ರಾಮಕೃಷ್ಣ, ಚಂದ್ರಕಾಂತ್ ಬೆಹಿಪ್ಪಳಗಾವ್, ಫರ್ನಾಂಡಿಸ್, ಕಮಲಾಕರ್ ಹೆಗಡೆ, ರೋಹಿದಾಸ್ ಗೋಡೆ, ದೇವಿ ದಾಸ್, ಶಾಮಣ್ಣ ಬಂದೋಳಗಿ ಪುರುಷೋತ್ತಮ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa