
ವಿಜಯಪುರ, 11 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್ ಆಯರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಮಾಪನ ಶಿಬಿರ ಜನೇವರಿ 12 ರಿಂದ ಜನೇವರಿ 14ರ ವರೆಗೆ ನಡೆಯಲಿದೆ.
ಚಿಕ್ಕ ಮಕ್ಕಳ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ಈ ಶಿಬಿರ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳಾದ ಕಡಿಮೆ ದೇಹದ ತೂಕ, ತೆಳುವಾದ ತೋಳುಗಳು ಮತ್ತು ಆಯಾಸ, ಕುಂಠಿತ ಬೆಳವಣಿಗೆ ಮುಂತಾದ ತೊಂದರೆಯಿಂದ ಬಳಲುವ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ತಪಾಸಣೆ ಮತ್ತು ಮಾಪನ(Weight, Height etc) ನಡೆಯಲಿದೆ. ತಪಾಸಣೆ ಬಳಿಕ ಉಚಿತ ಔಷಧಿ ನೀಡಲಾಗುವುದು.
ಅತೀ ಚಟುವಟಿಕೆ(APHD) ಮಕ್ಕಳಲ್ಲಿ ಕಂಡುಬರುವ ಲಕ್ಷಣಗಳಾದ ಒಂದೇ ಜಾಗದಲ್ಲಿ ಕುಳಿತುಕೊಳ್ಳದಿರುವುದು, ಕೈಕಾಲುಗಳನ್ನು ಅಲುಗಾಡಿಸುವುದು, ಆಟ ಮತ್ತು ಪಠ್ಯ ಚಟುವಟಿಕೆಗಳಲ್ಲಿ ಏಕಾಗ್ರತೆ ಕೊರತೆ, ಮರೆಯುವಿಕೆ ಹಾಗೂ ಉದ್ವೇಗ ಇರುವ ಮಕ್ಕಳಿಗೆ ಉಚಿತ ತಪಾಸಣೆ ನಡೆಸಿ ಔಷಧಿ ವಿತರಿಸಲಾಗುವುದು.
ಪಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ವಿಜಯಲಕ್ಷಿ ಬೆನಕಟ್ಟಿ ಮೊಬೈಲ್ ಸಂಖ್ಯೆ- 7619294547 ಅವರನ್ನು ಸಂರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande