ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಓಂಕಾರ ಮಂತ್ರ ಜಪ
ಗದಗ, 11 ಜನವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದ ಅಂಗವಾಗಿ ಓಂಕಾರ ಮಂತ್ರ ಜಪ, ವಿಶೇಷ ಪೂಜೆ ಹಾಗೂ ಆರತಿ ಕ
ಫೋಟೋ


ಗದಗ, 11 ಜನವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ‘ಸೋಮನಾಥ ಸ್ವಾಭಿಮಾನ ಪರ್ವ’ ಕಾರ್ಯಕ್ರಮದ ಅಂಗವಾಗಿ ಓಂಕಾರ ಮಂತ್ರ ಜಪ, ವಿಶೇಷ ಪೂಜೆ ಹಾಗೂ ಆರತಿ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣಗೊಂಡಿದ್ದು, ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರು ಪಾಲ್ಗೊಂಡು ಮಂತ್ರ ಪಠಣದಲ್ಲಿ ಭಾಗಿಯಾದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, 2026ರಲ್ಲಿ ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಮೇಲೆ ಘಜನಿ ಮಹಮದ್ ದಾಳಿ ನಡೆಸಿ 1000 ವರ್ಷಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ದೇಶದ ಇತಿಹಾಸದಲ್ಲಿ ಅತ್ಯಂತ ದುಃಖದ ಘಟನೆಯಾಗಿದೆ. ಆದರೆ ಆ ನಂತರ ನಡೆದ ಅನೇಕ ದಾಳಿಗಳ ನಡುವೆಯೂ ಸೋಮನಾಥ ದೇವಾಲಯ ಭಾರತದ ಸಾಂಸ್ಕೃತಿಕ ಏಕತೆ, ಧಾರ್ಮಿಕ ಪ್ರಜ್ಞೆ ಹಾಗೂ ಆತ್ಮಸ್ಥೈರ್ಯವನ್ನು ಮತ್ತಷ್ಟು ಬಲಪಡಿಸಿದೆ” ಎಂದು ಅವರು ಹೇಳಿದರು.

ಸೋಮನಾಥ ದೇವಾಲಯವು ಅನೇಕ ಬಾರಿ ಧ್ವಂಸಗೊಂಡರೂ ಪ್ರತೀ ಬಾರಿ ಗತವೈಭವದೊಂದಿಗೆ ಮರುನಿರ್ಮಾಣಗೊಂಡು ಇಂದಿಗೆ 75 ವರ್ಷಗಳನ್ನು ಪೂರೈಸಿದೆ. ಈ ಮಹತ್ವದ ಸಂದರ್ಭವನ್ನು ಸ್ಮರಿಸುವ ಉದ್ದೇಶದಿಂದ ದೇಶದ ಎಲ್ಲಾ ಶಿವಾಲಯಗಳಲ್ಲಿ ಪೂಜೆ, ಆರತಿ ಹಾಗೂ ಓಂಕಾರ ಮಂತ್ರ ಜಪ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಜನ–ಅಭಿಯಾನದಲ್ಲಿ ಎಲ್ಲ ದೇಶವಾಸಿಗಳು ಪಾಲ್ಗೊಂಡು, ಈ ಮೂರು ದಿನಗಳ ಕಾಲ ತಮ್ಮ ಹತ್ತಿರದ ಶಿವಾಲಯಗಳಲ್ಲಿ ಮಂತ್ರ ಪಠಣದಲ್ಲಿ ಭಾಗವಹಿಸಬೇಕು ಎಂಬುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ಜನತೆ ಸಹನಶೀಲತೆ, ಏಕತೆ, ಅಖಂಡತೆ, ನಿರಂತರತೆ ಮತ್ತು ಪುನರುತ್ಥಾನದ ಯಶೋಗಾಥೆಯನ್ನು ನೆನಪಿಸಿಕೊಳ್ಳಬೇಕು ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರ ಈ ವರ್ಷ ‘ಸೋಮನಾಥ ಪರ್ವ’ವನ್ನು ಆಯೋಜಿಸಲು ನಿರ್ಧರಿಸಿದೆ. ಈಗಾಗಲೇ ಜನವರಿ 1ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸೋಮನಾಥ ದೇವಾಲಯದಲ್ಲಿ ‘ಸಹಸ್ರ ಸಂಕಲ್ಪ ಯಾತ್ರೆ’ ಆಯೋಜಿಸಲಾಗಿದ್ದು, ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ವರ್ಷಪೂರ್ತಿ ಆಚರಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ವಿವರಿಸಿದರು.

ಈ ಕಾರ್ಯಕ್ರಮದ ಮೂಲಕ ಸೋಮನಾಥ ದೇವಾಲಯದ ಅಖಂಡತೆ, ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರದ ಆತ್ಮಗೌರವವನ್ನು ಕಾಪಾಡುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳಬೇಕು. ಪ್ರಾರ್ಥನೆ ಹಾಗೂ ಸಂಕಲ್ಪದ ಮೂಲಕ ದೇಶದ ಏಕತೆ ಮತ್ತು ಶಾಂತಿಗಾಗಿ ಪ್ರಾರ್ಥಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿರಹಟ್ಟಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ ಮುಳಗುಂದ, ವಿಜಯಕುಮಾರ ಹತ್ತಿಕಾಳ, ಮಹಾದೇವಪ್ಪ ಅಣ್ಣಿಗೇರಿ, ಮಂಜುಳಾ ಗುಂಜಳ, ಕವಿತಾ ಶೇರಸೂರಿ, ಎಂ.ಆರ್. ಪಾಟೀಲ, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಚನ್ನವೀರಗೌಡ ಪಾಟೀಲ, ಶಿವನಗೌಡ ಕಂಠಿಗೌಡ್ರ, ಚನ್ನವೀರಪ್ಪ ಹೂಗಾರ, ಈರಣ್ಣ ಪೂಜಾರ, ಪ್ರವೀಣ ಬೋಮಲೆ, ರಾಜಣ್ಣ ಅಂದಲಗಿ, ನೀಲಪ್ಪ ಕರ್ಜಕಣ್ಣವರ, ರಾಜಶೇಖರ ಶಿರಹಟ್ಟಿ, ವಿಜಯ ಮೆಕ್ಕಿ, ಥಾವರಪ್ಪ ಲಮಾಣಿ, ಸಂತೋಷ ಜಾವೂರ, ರಮೇಶ ಹಾಳದೋಟದ, ಕಲ್ಲಪ್ಪ ಹಡಪದ, ವಿಶಾಲ ಬಟಗುರ್ಕಿ, ಪ್ರವೀಣ ಮುದಗಲ್, ಮಂಜುನಾಥ ಗಜಾಕೋಶ, ಯಶವಂತ ಭಜಂತ್ರಿ, ಉಳವೇಶಗೌಡ ಪಾಟೀಲ, ರಾಘವೇಂದ್ರ ಪೂಜಾರ, ಬಸವರಾಜ ಬಂಡಾರಿಮಠ, ಸಮೀರ ಪೂಜಾರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಸೋಮನಾಥ ದೇವಾಲಯದ ಪುನರುತ್ಥಾನ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಎಲ್ಲರೂ ಸಂಕಲ್ಪ ಮಾಡಿದ್ದು, ದೇಶದ ಶಾಂತಿ–ಸೌಹಾರ್ದಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande