
ಬೆಂಗಳೂರು, 11 ಜನವರಿ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ‘ಸಖಿ’ ಒನ್ ಸ್ಟಾಪ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಆಧಾರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೇಮಕಾತಿ ನಡೆಯುವ ಹುದ್ದೆಗಳು ಹೀಗಿವೆ: ಘಟಕ ಆಡಳಿತಾಧಿಕಾರಿ – 03, ಆಪ್ತ ಸಮಾಲೋಚಕರು – 03, ಸಮಾಜ ಸೇವಾ ಕಾರ್ಯಕರ್ತರು/ಕೇಸ್ ವರ್ಕರ್ – 07, ಕಾನೂನು ಸಲಹೆಗಾರರು/ಪ್ಯಾರಾ ಲೀಗಲ್ – 03 ಹಾಗೂ ವಿವಿಧೋದ್ದೇಶ ಸ್ವಚ್ಛತಗಾರರು/ಸೆಕ್ಯೂರಿಟಿ (ರಾತ್ರಿ ಕಾವಲು) – 08 ಹುದ್ದೆಗಳು.
ಘಟಕ ಆಡಳಿತಾಧಿಕಾರಿ ಹುದ್ದೆಗೆ ಎಂ.ಎಸ್.ಡಬ್ಲ್ಯೂ., ಸ್ನಾತಕೋತ್ತರ ಕಾನೂನು ಪದವಿ, ಎಂ.ಎಸ್.ಸಿ ಹೋಮ್ ಸೈನ್ಸ್, ಸೈಕಾಲಜಿ ಅಥವಾ ಸೈಕಿಯಾಟ್ರಿ ಪದವಿ ಹೊಂದಿದ್ದು ಸರ್ಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಇರಬೇಕು. ಆಪ್ತ ಸಮಾಲೋಚಕ ಹುದ್ದೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ ಮೂರು ವರ್ಷಗಳ ಅನುಭವ ಅಗತ್ಯವಾಗಿದೆ.
ಸಮಾಜ ಸೇವಾ ಕಾರ್ಯಕರ್ತ/ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ. ಅಥವಾ ಬಿ.ಎ (ಸೋಷಿಯಾಲಜಿ/ಮಹಿಳಾ ಅಧ್ಯಯನ) ಪದವಿ ಹಾಗೂ ಕನಿಷ್ಠ ಎರಡು ವರ್ಷಗಳ ಅನುಭವ ಇರಬೇಕು. ಕಾನೂನು ಸಲಹೆಗಾರ/ಪ್ಯಾರಾ ಲೀಗಲ್ ಹುದ್ದೆಗೆ ಕಾನೂನು ಪದವಿ ಹಾಗೂ ಎರಡು ವರ್ಷಗಳ ಅನುಭವ ಅಗತ್ಯ. ಸ್ವಚ್ಛತಗಾರರು/ಸೆಕ್ಯೂರಿಟಿ ಹುದ್ದೆಗೆ ಏಳನೇ ತರಗತಿ ವಿದ್ಯಾರ್ಹತೆ ಮತ್ತು ಸಂಬಂಧಿಸಿದ ಅನುಭವ ಹೊಂದಿರಬೇಕು.
ಎಲ್ಲ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ, ಕನ್ನಡ ಹಾಗೂ ಇಂಗ್ಲಿಷ್ ಭಾಷಾ ಪ್ರಾವೀಣ್ಯ ಅಗತ್ಯವಾಗಿದ್ದು, ಅಭ್ಯರ್ಥಿಗಳ ವಯಸ್ಸು 18 ರಿಂದ 45 ವರ್ಷಗಳೊಳಗಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ತಮ್ಮ ವಿವರಗಳೊಂದಿಗೆ ಅಗತ್ಯ ದಾಖಲೆಗಳನ್ನು ಸಂಲಗ್ನಗೊಳಿಸಿ ಜನವರಿ 30ರೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಉಪ ನಿರ್ದೇಶಕರವರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ 080-29578688 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa