
ಗದಗ, 01 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಹಿತ ಕಾಯುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಮೊದಲ ಹಂತದಲ್ಲೇ 1 ಲಕ್ಷ ರೂ. ‘ ಕ್ಷೇಮಾಭಿವೃದ್ಧಿ ನಿಧಿ’ ಸಂಗ್ರಹವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಎನ್.ಆರ್ ಭಾಂಡಗೆ ಸಂಪಾದಕತ್ವದ ‘ಚಕ್ರವರ್ತಿ’ ಕನ್ನಡ ದಿನಪತ್ರಿಕೆಯ 2026ನೇ ವರ್ಷದ ವರ್ಣರಂಜಿತ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಮಲ್ಲಸಮುದ್ರ-ಕಳಸಾಪೂರ ಓಂಕಾರೇಶ್ವರಗಿರಿಯ ಶ್ರೀ ಓಂಕಾರೇಶ್ವರ ಹಿರೇಮಠದ ಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಭಕ್ತರು ನೀಡಿದ್ದ 5001 ರೂ. ಹಣವನ್ನು ‘ಪತ್ರಕರ್ತರ ಕ್ಷೇಮಾಭಿವೃದ್ಧಿ’ಗೆ ನೀಡುವ ಮೂಲಕ ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಈ ವೇಳೆ ತಮ್ಮ ಮಠಕ್ಕೆ ನೀರು ಇಲ್ಲದ ಕಾರಣ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಪತ್ರಕರ್ತರು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಸೆಳೆಯುವ ಬಗ್ಗೆ ಆ ವಿಚಾರವನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರತ್ನಾಕರವಾಣಿ ದಿನಪತ್ರಿಕೆಯ ಸಂಪಾದಕರಾದ ಜಗದೀಶ ಪೂಜಾರ ಅವರು ಶ್ರೀಮಠಕ್ಕೆ ಬೋರ್‌ವೆಲ್ ಹಾಕಿಸಿ ಕೊಡುವ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು ‘ಅಲ್ಲಿ ನೀರು ಬೀಳುವದಿಲ್ಲ ಎಂದಾಗ ಜಗದೀಶ ಪೂಜಾರ ಅವರು ಪೂಜ್ಯರಿಗೆ ’21,000 ರೂ.ಗಳನ್ನು ಪೂಜ್ಯರಿಗೆ ನೀಡಿದರು.
ಆದರೆ, ಪೂಜ್ಯರು ಮಾತ್ರ 'ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ'ಗೆ ಕೊಡಬಯಸಿದ್ದ 5,001 ರೂ. ಜತೆಗೆ ಶ್ರಿಮಠಕ್ಕೆ ಜಗದೀಶ ಪೂಜಾರ ಅವರು ನೀಡಿದ ದೇಣಿಗೆಯ 21,000 ರೂ. ಹಣವನ್ನೂ ಸೇರಿಸಿ ಒಟ್ಟು 26,001 ರೂ.ಗಳನ್ನು ಕಾನಿಪ ಜಿಲ್ಲಾ ಸಂಘಕ್ಕೆ ನೀಡಿ, ಈ ಹಣದಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಎಂದು ಹರಸಿ ಆಶೀರ್ವದಿಸಿದರು.
ಇದೇ ಕಾರ್ಯಕ್ರಮದ ವೇದಿಕೆ ಮೇಲಿದ್ದ ಕಿತ್ತೂರ ಕರ್ನಾಟಕ ದಿನಪತ್ರಿಕೆ ಸಂಪಾದಕರಾದ ಮಂಜುನಾಥ ಬಸಪ್ಪ ಅಬ್ಬಿಗೇರಿ ಅವರು ತಾವೂ ಕೂಡ ‘ಕ್ಷೇಮಾಭಿವೃದ್ಧಿ ನಿಧಿ’ಗೆ 25 ಸಾವಿರ ರೂ. ನೀಡುವ ಬಗ್ಗೆ ವಾಗ್ದಾನ ಮಾಡಿದರು. ಅಷ್ಟೇ ಅಲ್ಲ, ಎ.ಬಿ.ಎಸ್.ಎಸ್.ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಈಶ್ವರಸಾ ಮೇರವಾಡೆ ಅವರು 11,000-00 ರೂ., ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಶ್ರೀ ಮಾರುತಿ ಪವಾರ ಅವರು 5,555-00 ರೂ., ಗದಗ ಎಸ್.ಎಸ್.ಕೆ ಪಂಚ ಕಮೀಟಿ ಅಧ್ಯಕ್ಷರಾದ ಶ್ರೀ ಫಕೀರಸಾ ಬಿ ಭಾಂಡಗೆ ಅವರು 11,111-00 ರೂ., ನ್ಯಾಯವಾದಿ ಶ್ರೀ. ಜೋಸೆಫ್ ಉಧೋಜಿ ಹಾಗೂ ಸಾಹಿತಿ ಶ್ರೀ ಎ.ಎಸ್ ಮಕಾನದಾರ ಅವರು ತಲಾ 1,000-00 ರೂ., ಡಿಜಿ ಎಂಟರ್ಪ್ರೈಸಸ್ (ಶ್ರೀ ಆನಂದಯ್ಯ ವಿರಕ್ತಮಠ, ಸಂಪಾದಕರು, ರೈಜ್ ಆಫ್ ಗದಗ ದಿನಪತ್ರಿಕೆ)- 5000-00 ರೂ., ಹುಬ್ಬಳ್ಳಿಯ ಶ್ರೀ ಬಾಲಚಂದ್ರ ಭಾಂಡಗೆ- 5000-00 ರೂ. ಮತ್ತು ಹಿರಿಯ ಪತ್ರಕರ್ತ ಮತ್ತು ನ್ಯಾಯವಾದಿ ಆಗಿರುವ ಶ್ರೀ ಅನಂತ ಎಸ್. ಕಾರ್ಕಳ ಅವರು 9,333-00 ರೂ. ಸೇರಿಸಿ ಒಟ್ಟು 1 ಲಕ್ಷ ರೂ. ಠೇವಣಿ ಸಂಗ್ರಹ (ವಾಗ್ದಾನ) ವಾಯಿತು.
ಈ ಪೈಕಿ ಪೂಜ್ಯರು ನೀಡಿದ 26,001 ರೂ., ಗದಗ ಎಸ್.ಎಸ್.ಕೆ ಪಂಚ ಕಮೀಟಿ ಅಧ್ಯಕ್ಷರಾದ ಶ್ರೀ ಫಕೀರಸಾ ಬಿ ಭಾಂಡಗೆ ಅವರು 11,111-00 ರೂ., ನ್ಯಾಯವಾದಿ ಶ್ರೀ. ಜೋಸೆಫ್ ಉಧೋಜಿ ಹಾಗೂ ಸಾಹಿತಿ ಶ್ರೀ ಎ.ಎಸ್ ಮಕಾನದಾರ ಅವರು ತಲಾ 1,001-00 ರೂ. ಮತ್ತು ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಶ್ರೀ ಮಾರುತಿ ಪವಾರ ಅವರು 5,555-00 ರೂ. ಹಣವನ್ನು ಸ್ಥಳದಲ್ಲಿಯೇ ನೀಡಿದ್ದು, 44,669-00 ರೂ. ನಗದು ಸಂಗ್ರಹವಾಗಿದೆ.
ಉಳಿದವರ ಹಣ ಒಂದೆರಡು ದಿನಗಳಲ್ಲಿ ಬರಲಿದ್ದು, ಈ ಮೂಲಕ ಒಂದು ಲಕ್ಷ ರೂ. ಹಣವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಠೇವಣಿ ಇಡಲಾಗುವುದು. ಕನಿಷ್ಟ 10 ಲಕ್ಷ ರೂ. ಹಣವನ್ನು ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಂಗ್ರಹದ ಗುರಿ ಹೊಂದಲಾಗಿದೆ ಎಂದು ರಾಜು ಹೆಬ್ಬಳ್ಳಿ ತಿಳಿಸಿದರು.
ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಹಿತ ಕಾಯಲು ಸಂಘವು ಬದ್ಧವಾಗಿದ್ದು, ಬರುವ ದಿನಗಳಲ್ಲಿ ಪತ್ರಕರ್ತರಿಗೆ ಹಾಗೂ ಅವರ ಕುಟುಂಬಕ್ಕಾಗಿ ಈ ಕ್ಷೇಮಾಭಿವೃದ್ಧಿ ನಿಧಿಯ ಬಡ್ಡಿ ಹಣವನ್ನು ಬಳಸಲಾಗುವುದು. ಈ ನಿಧಿಯ ಮೊತ್ತವನ್ನು ಕನಿಷ್ಟ 10 ಲಕ್ಷ ರೂ.ಹೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ತಿಳಿಸಿದ್ದಾರೆ.
ಅಭಿನಂದನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕಕ್ಕೆ ಕ್ಷೇಮಾಭಿವೃದ್ಧಿ ನಿಧಿ ನೀಡಿದವರಿಗೆ ಹಾಗೂ ಈ ಕಾರ್ಯಕ್ಕೆ ಸಹಕಾರ ನೀಡಲು ವೇದಿಕೆ ಕಲ್ಪಿಸಿದ ಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ, ಕಿತ್ತೂರ ಕರ್ನಾಟಕ ದಿನಪತ್ರಿಕೆ ಸಂಪಾದಕರಾದ ಮಂಜುನಾಥ ಬಸಪ್ಪ ಅಬ್ಬಿಗೇರಿ, ಎ.ಬಿ.ಎಸ್.ಎಸ್.ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಈಶ್ವರಸಾ ಮೇರವಾಡೆ, ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಮಾರುತಿ ಪವಾರ, ಗದಗ ಎಸ್.ಎಸ್.ಕೆ ಪಂಚ ಕಮೀಟಿ ಅಧ್ಯಕ್ಷರಾದ ಫಕೀರಸಾ ಬಿ ಭಾಂಡಗೆ, ನ್ಯಾಯವಾದಿ ಜೋಸೆಫ್ ಉಧೋಜಿ, ಸಾಹಿತಿ ಎ.ಎಸ್ ಮಕಾನದಾರ, ಡಿಜಿ ಎಂಟರ್ಪ್ರೈಸಸ್ (ಆನಂದಯ್ಯ ವಿರಕ್ತಮಠ, ಸಂಪಾದಕರು, ರೈಜ್ ಆಫ್ ಗದಗ ದಿನಪತ್ರಿಕೆ), ಹುಬ್ಬಳ್ಳಿಯ ಬಾಲಚಂದ್ರ ಭಾಂಡಗೆ ಮತ್ತು ಹಿರಿಯ ಪತ್ರಕರ್ತ ಮತ್ತು ನ್ಯಾಯವಾದಿ ಆಗಿರುವ ಅನಂತ ಎಸ್. ಕಾರ್ಕಳ ಅವರು ಸೇರಿ ಈ ಕಾರ್ಯಕ್ಕೆ ಸಹಕಾರ ನೀಡಿದ ಚಕ್ರವರ್ತಿ ದಿನಪತ್ರಿಕೆ ಸಂಪಾದಕರಾದ ಎನ್. ಆರ್. ಭಾಂಡಗೆ ನೇತ್ರತ್ವದ ತಂಡಕ್ಕೆ ಹಾಗೂ ಹಿರಿಯ ಪತ್ರಕರ್ತರಾದ ಡಾ.ಅನಂತ ಎಸ್. ಕಾರ್ಕಳ, ಜಗದೀಶ ಕುಲಕರ್ಣಿ, ನ್ಯಾಯವಾದಿ ಮಿತ್ರ ಟಿ.ಎನ್. ಭಾಂಡಗೆ, ಜಗದೀಶ ಪೂಜಾರ ಸೇರಿ ಎಲ್ಲರಿಗೂ ಜಿಲ್ಲಾ ಸಂಘದ ಪರವಾಗಿ 'ಅನಂತ' ಧನ್ಯವಾದಗಳು.
ಹಿಂದೂಸ್ತಾನ್ ಸಮಾಚಾರ್ / lalita MP