
ವಿಜಯಪುರ, 01 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯ ಪ್ರಮುಖ ಹಿಂಗಾರು ಬೆಳೆಗಳಲ್ಲಿ ಕಡಲೆ ಬೆಳೆ ಒಂದಾಗಿದೆ. ಪ್ರಸಕ್ತ ವರ್ಷದಲ್ಲಿ ಬೆಳೆದಿರುವ ಕಡಲೆ ಬೆಳೆಯಲ್ಲಿ ಅಲ್ಲಲ್ಲಿ ಕಾಯಿಕೊರಕದ ಕೀಟ ಬಾಧೆ ಕಂಡು ಬಂದಿದ್ದು, ಇಳುವರಿಯ ಮೇಲೆ ಪರಿಣಾಮ ಬೀರುವ ಕಾರಣ, ರೈತರು ಮುಂಜಾಗ್ರತಾ ಕ್ರಮವಾಗಿ, ಬಿತ್ತುವಾಗ ಪ್ರತಿ ಎಕರೆಗೆ 20 ಗ್ರಾಂ ಸೂರ್ಯಕಾಂತಿ ಅಥವಾ 20 ಗ್ರಾಂ ಜೋಳದ ಬೀಜಗಳನ್ನು ಕೂಡಿಸಿ ಬಿತ್ತಬೇಕು. ನಂತರ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರುಮುರಿ ಹೊಲದಲ್ಲಿ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಟಗಳನ್ನು ತಿನ್ನಲು ಪ್ರೋತ್ಸಾಹ ನೀಡಿದಂತಾಗುವುದರಿಂದ ಕೀಟ ಬಾಧೆಯಿಂದ ಬೆಳೆ ರಕ್ಷಿಸಬಹುದು.
ಕೀಟನಾಶಕಗಳಾದ ಕ್ಲೋರಂಟ್ರಿನಾಲಿಪ್ರೋಲ 18.5 ಎಸ್ ಸಿ-0.15ಮಿ.ಲೀ ಅಥವಾ ಸ್ಪೈನೋಸಾಡ್ 45 ಎಸ್ -ಸಿ0.1 ಮಿ.ಲೀ ನಷ್ಟು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗಳ ಮೇಲೆ ಸಿಂಪಡಿಸಬೇಕು.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande