
ಬಳ್ಳಾರಿ, 01 ಜನವರಿ (ಹಿ.ಸ.) :
ಆ್ಯಂಕರ್ : ಕಲಾತಂಡಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಸಮುದಾಯ ಆರೋಗ್ಯ ಅಧಿಕಾರಿ ರವಿ ಕುಮಾರ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಹಿತಿ ಶಿಕ್ಷಣ ಸಂವಹನ ವಿಭಾಗ ಬಳ್ಳಾರಿ, ಚಿಗುರು ಕಲಾತಂಡ ಇಬ್ರಾಹಿಂಪುರ ಇವರ ಸಹಯೋಗದಲ್ಲಿ ಬಿ.ಬೆಳಗಲ್ ತಾಂಡ ಗ್ರಾಮದಲ್ಲಿ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾನಪದ ಕಲಾ ಪ್ರದರ್ಶನ ಮೂಲಕ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲಾತಂಡಗಳು ಆರೋಗ್ಯ ಜಾಗೃತಿ ಕುರಿತು ಇತರೆ ಗ್ರಾಮಗಳಲ್ಲಿ ಕೂಡ ವಿವಿಧ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳು ಹಾಗೂ ಇತರೆ ವಿಷಯಗಳ ಕುರಿತು ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹೆರಿಗೆ ತಾಯಂದಿರ ಆರೋಗ್ಯ, ಗರ್ಭಿಣಿ ಆರೋಗ್ಯ, ತಾಯಿ ಕಾರ್ಡ್, ಕುಷ್ಟರೋಗ, ರಕ್ತ ಹೀನತೆ, ತಾಯಿ ಎದೆ ಹಾಲಿನ ಮಹತ್ವ, ಬಾಲ್ಯ ವಿವಾಹ, ಆಂಬುಲೆನ್ಸ್ ಸೇವೆ, ಹದಿಹರಿಯದವರ ಆರೋಗ್ಯ ಸಮಸ್ಯೆಗಳು, ಲಸಿಕೆಗಳು ಹಾಗೂ ಇನ್ನಿತರೆ ವಿಷಯಗಳ ಕುರಿತು ಕಲಾವಿದರು ಅಭಿನಯ ಮತ್ತು ಜಾಗೃತಿ ಗೀತೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಆಶಾರಾಣಿ, ಆಶಾ ಕಾರ್ಯಕರ್ತರಾದ ಲಲಿತ ಬಾಯಿ, ತಿಪ್ಪಮ್ಮ, ಪಾರುಬಾಯಿ, ವಸಂತ ಬಾಯಿ, ಜ್ಯೋತಿಬಾಯಿ, ಗ್ರಾಮದ ಹಿರಿಯರಾದ ಲಚ್ಚನಾಯಕ, ಮಂಜುನಾಥ್ ನಾಯಕ, ಶಿವನಾಯಕ್, ಮೇಘನಾಯಕ್, ಚಿಗುರು ಕಲಾ ತಂಡದ ಕಲಾವಿದರಾದ ಹುಲುಗಪ್ಪ ಎಸ್.ಎಂ., ಎಚ್.ರಮೇಶ್, ಹೆಚ್.ಜಿ.ಸುಂಕಪ್ಪ, ಎರಿಸ್ವಾಮಿ, ಸೈಪುಲ್ಲ, ವೆಂಕಟೇಶ್, ಸರ್ವ ಮಂಗಳಮ್ಮ, ದಿವ್ಯ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಶಾಲೆಯ ಶಿಕ್ಷಕರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್