ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ದಂಪತಿಗೆ ಸಮನ್ಸ್
ಮುಂಬಯಿ, 09 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಆರ್ಥಿಕ ಅಪರಾಧ ವಿಭಾಗ ಇಬ್ಬರಿಗೂ ಸೆಪ್ಟೆಂಬರ್ 15ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ದಂಪತಿಯ ವಿರುದ್ಧ 2015ರಿಂದ
Shilpa shetty


ಮುಂಬಯಿ, 09 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾಗೆ ಮುಂಬೈ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.

ಆರ್ಥಿಕ ಅಪರಾಧ ವಿಭಾಗ ಇಬ್ಬರಿಗೂ ಸೆಪ್ಟೆಂಬರ್ 15ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ದಂಪತಿಯ ವಿರುದ್ಧ 2015ರಿಂದ 2023ರವರೆಗೆ ₹60.48 ಕೋಟಿ ವಂಚನೆ ಪ್ರಕರಣ ದಾಖಲಾಗಿದೆ.

ಈ ಹಿಂದೆ ಲೂಕ್ ಔಟ್ ಸರ್ಕ್ಯುಲರ್ ಹೊರಡಿಸಿ, ದೇಶ ತೊರೆಯುವುದನ್ನು ನಿಷೇಧಿಸಲಾಗಿತ್ತು. ಪ್ರಾಥಮಿಕ ವಿಚಾರಣೆಗೆ ಹಲವಾರು ಬಾರಿ ಸಮನ್ಸ್ ನೀಡಿದರೂ ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ಉಲ್ಲೇಖಿಸಿ ಹಾಜರಾಗಿರಲಿಲ್ಲ.

ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ನಿರ್ದೇಶಕ ದೀಪಕ್ ಕೊಥಾರಿ ಅವರ ದೂರು ಮೇರೆಗೆ ಪ್ರಕರಣ ದಾಖಲಾಗಿದ್ದು, 75 ಕೋಟಿ ರೂ. ಸಾಲದ ಒಪ್ಪಂದದ ನೆಪದಲ್ಲಿ ಹೂಡಿಕೆ ರೂಪದಲ್ಲಿ ಹಣ ಸ್ವೀಕರಿಸಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 403, 406 ಮತ್ತು 34ರಡಿ ದೂರು ದಾಖಲಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande