ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರತಿ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಬಿ. ಸುದರ್ಶನ್ ರೆಡ್ಡಿ ಅವರನ್ನು ಬಿಜೆಪಿ ತೀವ್ರವಾಗಿ ಗುರಿಯಾಗಿಸಿಕೊಂಡಿದೆ.
ರೆಡ್ಡಿ ಅವರು ಮೇವು ಹಗರಣದ ಅಪರಾಧಿ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಿ, ದೇಶದ ಆತ್ಮವನ್ನು ಉಳಿಸಲು ಮತ ಹಾಕಿ ಎಂದು ಮನವಿ ಮಾಡಿರುವುದನ್ನು ಬಿಜೆಪಿ “ಬೂಟಾಟಿಕೆ” ಎಂದು ಕರೆದಿದೆ.
ಪಕ್ಷದ ಹಿರಿಯ ನಾಯಕ ಡಾ. ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಗರಣಗಳಲ್ಲಿ ತಪ್ಪಿತಸ್ಥ ಲಾಲು ಪ್ರಸಾದ್ ಅವರನ್ನು ಭೇಟಿ ಮಾಡುವ ನಿವೃತ್ತ ನ್ಯಾಯಾಧೀಶರು ದೇಶದ ಆತ್ಮದ ಬಗ್ಗೆ ಮಾತನಾಡುವುದು ನಕಲಿ ಎಂದು ಹೇಳಿದರು. ನ್ಯಾಯಾಧೀಶರನ್ನು ಗೌರವಿಸುತ್ತೇವೆ, ಆದರೆ ರಾಜಕೀಯ ಮೈದಾನದಲ್ಲಿ ಬಂದಾಗ ಪ್ರಶ್ನೆಗಳು ತಪ್ಪದೇ ಎದ್ದೇಳುತ್ತವೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa