ಹರಿದ್ವಾರ-ಮೋತಿಚೂರು ಮಾರ್ಗದಲ್ಲಿ 6 ರೈಲು ರದ್ದು
ಹರಿದ್ವಾರ, 08 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಹರಿದ್ವಾರ–ಮೋತಿಚೂರು ರೈಲು ಹಳಿಯ ಮೇಲೆ ಕಲ್ಲು ಬಿದ್ದ ಪರಿಣಾಮವಾಗಿ ಉತ್ತರ ರೈಲ್ವೆ ಸೋಮವಾರ 6 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಇದೇ ವೇಳೆ 13 ರೈಲುಗಳ ಸಂಚಾರಕ್ಕೆ ಭಾಗಶಃ ವ್ಯತ್ಯಯ ಉಂಟಾಗಿದೆ. ರದ್ದಾದ ರೈಲುಗಳಲ್ಲಿ ಡೆಹ್ರಾಡೂನ್–ಆನಂದ್ ವಿಹಾರ್
ಹರಿದ್ವಾರ-ಮೋತಿಚೂರು ಮಾರ್ಗದಲ್ಲಿ 6 ರೈಲು ರದ್ದು


ಹರಿದ್ವಾರ, 08 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಹರಿದ್ವಾರ–ಮೋತಿಚೂರು ರೈಲು ಹಳಿಯ ಮೇಲೆ ಕಲ್ಲು ಬಿದ್ದ ಪರಿಣಾಮವಾಗಿ ಉತ್ತರ ರೈಲ್ವೆ ಸೋಮವಾರ 6 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಇದೇ ವೇಳೆ 13 ರೈಲುಗಳ ಸಂಚಾರಕ್ಕೆ ಭಾಗಶಃ ವ್ಯತ್ಯಯ ಉಂಟಾಗಿದೆ.

ರದ್ದಾದ ರೈಲುಗಳಲ್ಲಿ ಡೆಹ್ರಾಡೂನ್–ಆನಂದ್ ವಿಹಾರ್ ಟರ್ಮಿನಲ್ (22458), ಡೆಹ್ರಾಡೂನ್–ಸಹರಾನ್‌ಪುರ (54342), ಋಷಿಕೇಶ–ಹರಿದ್ವಾರ (54482), ಹರಿದ್ವಾರ–ಋಷಿಕೇಶ (54483), ಸಹರಾನ್‌ಪುರ–ಡೆಹ್ರಾಡೂನ್ (54341) ಮತ್ತು ಆನಂದ್ ವಿಹಾರ್ ಟರ್ಮಿನಲ್–ಡೆಹ್ರಾಡೂನ್ (22457) ಸೇರಿವೆ.

ಇನ್ನು ಹಲವು ರೈಲುಗಳು ಹರಿದ್ವಾರ, ಜ್ವಾಲಾಪುರ ಮತ್ತು ವೀರಭದ್ರ ನಿಲ್ದಾಣಗಳಲ್ಲಿ ಅಲ್ಪಾವಧಿಗೆ ಕೊನೆಗೊಂಡಿದ್ದು, ಕೆಲವು ರೈಲುಗಳು ಅಲ್ಲಿ ಪ್ರಾರಂಭವಾಗಲಿವೆ. ಯೋಗನಗರಿ ಋಷಿಕೇಶ–ಪುರಿ (18478) ರೈಲು ಬೆಳಿಗ್ಗೆ 5:35 ಬದಲು ಸಂಜೆ 5 ಗಂಟೆಗೆ ಚಲಿಸಲಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಹಳಿಯಲ್ಲಿ ಬಿದ್ದ ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಸಂಚಾರ ಸಾಮಾನ್ಯ ಸ್ಥಿತಿಗೆ ಬರುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande