ರಾಯಚೂರು : ಆದಿ ಕರ್ಮಯೋಗಿ ಅಭಿಯಾನ ತರಬೇತಿ
ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಷ್ಟçಮಟ್ಟದಲ್ಲಿನ ಆದಿಕರ್ಮಯೋಗಿ ಕಾರ್ಯಕ್ರಮ ಆದಿ ಕರ್ಮಯೋಗಿ ಅಭಿಯಾನ ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು. ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಿಲ್ವರ್ ಜುಬ್ಲಿ ಸೆಮಿನಾರ್ ಹಾಲ್‌ನಲ್ಲಿ
ರಾಯಚೂರು : ಆದಿ ಕರ್ಮಯೋಗಿ ಅಭಿಯಾನ ತರಬೇತಿ


ರಾಯಚೂರು : ಆದಿ ಕರ್ಮಯೋಗಿ ಅಭಿಯಾನ ತರಬೇತಿ


ರಾಯಚೂರು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಷ್ಟçಮಟ್ಟದಲ್ಲಿನ ಆದಿಕರ್ಮಯೋಗಿ ಕಾರ್ಯಕ್ರಮ ಆದಿ ಕರ್ಮಯೋಗಿ ಅಭಿಯಾನ ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.

ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಿಲ್ವರ್ ಜುಬ್ಲಿ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಗಾರಕ್ಕೆ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಡಾ.ಟಿ ರೋಣಿ ಅವರು ಜ್ಯೋತಿ ಬೆಳೆಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಡಾ.ಟಿ ರೋಣಿ ಅವರು, ಮಾನ್ಯ ಪ್ರಧಾನಮಂತ್ರಿಯವರ ದೂರದೃಷ್ಟಿಯ ಯೋಜನೆಯಾದ ಧರ್ತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ಮೊದಲ ಹಂತವಾಗಿ ತೆಗೆದುಕೊಂಡಿರುವ ಏಳು ಇಲಾಖೆಗಳು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮಹತ್ವಪೂರ್ಣವಾಗಿದೆ ಎಂದರು.

ಇಲಾಖೆಯಿಂದ ತರಬೇತಿಗೆ ಆಗಮಿಸಿದವರು ತರಬೇತಿಯಲ್ಲಿ ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಿ ಅಭಿಯಾನದ ಉದ್ದೇಶ ಮತ್ತು ಮಹತ್ವ ಅರಿಯಬೇಕು. ಕಟ್ಟಕಡೆಯ ವ್ಯಕ್ತಿಗಳಿಗೆ ಯೋಜನೆಯ ಪ್ರಯೋಜನೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ಶ್ರಮಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ನೋಡಲ್ ಅಧಿಕಾರಿಗಳು ಆಗಿರುವ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ ಅವರು ಮಾತನಾಡಿ, ಧರ್ತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಗೆ ಸಂಬ0ಧಿಸಿದ0ತೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಆದಿಕರ್ಮಯೋಗಿ ಕಾರ್ಯಕ್ರಮವು ಬುಡಕಟ್ಟು ಪ್ರದೇಶಗಳಲ್ಲಿ ಬಹುಶ್ರೇಣಿಯ ಜವಾಬ್ದಾರಿಯುತ ಆಡಳಿತವನ್ನು ರೂಪಿಸುವ ಗುರಿ ಹೊಂದಿದ್ದು, ಬುಡಕಟ್ಟು ಜನಾಂಗದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಮುದಾಯದ ತೊಡಗಿಸಿಕೊಳ್ಳುವಿಕೆ, ಸಾಂಸ್ಥಿಕ ಒಗ್ಗೂಡುವಿಕೆ ಹಾಗೂ ಸದೃಢದ ನಾಯಕತ್ವದ ಆಶಯ ಹೊಂದಿದೆ.

ಈ ಕಾರ್ಯಕ್ರಮದ ಕುರಿತು ಮೊದಲ ಪ್ರ‍್ರಾದೇಶಿಕ ಕಾರ್ಯಾಗಾರವು ಕಳೆದ ಜುಲೈ ಮಾಹೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ರಾಯಚೂರು ಜಿಲ್ಲೆಗೆ ಸಂಬAಧಿಸಿದAತೆ ಮೊದಲ ಹಂತದಲ್ಲಿ 4 ದಿನಗಳ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವು ಸಹ ಇಲಾಖೆಗಳ ಜಿಲ್ಲಾ ಮಾಸ್ಟರ್ ಟ್ರೇರ‍್ಸ್ ಎಂದು ಗುರುತಿಸಲಾದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದೆ.

ಮುಂದುವರೆದು, ಜಿಲ್ಲಾ ಮಟ್ಟದಲ್ಲಿ ತಾಲೂಕಾ ತರಬೇತಿದಾರರಿಗೆ ತರಬೇತಿಯನ್ನು ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ಸೂಚಿಸಿದಂತೆ ಆಗಸ್ಟ್ ಮಾಹೆಯಲ್ಲಿ ಓರಿಯಂಟೇಶನ್ ಕಾರ್ಯಕ್ರಮ ನಡೆಸಲಾಗಿದೆ. ಈ ಕಾರ್ಯಾಗಾರದ ಮುಂದುವರೆದ ಭಾಗವಾಗಿ ಇದೀಗ 3 ದಿನಗಳ ತರಬೇತಿ ಕಾರ್ಯಾಗಾರವನ್ನು ತಾಲೂಕು ಮಟ್ಟದ ಅಧಿಕಾರಿಗಳಿಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ತರಬೇತಿ ಕಾರ್ಯಾಗಾರದಲ್ಲಿ ಏಳು ಇಲಾಖೆಗಳಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು ಮಾಸ್ಟರ್ ಟ್ರೇನರ್‌ಗಳಾಗಿ ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಮಾಡಿಸಲಾಯಿತು. ಪಿ.ಪಿ.ಟಿ. ಮತ್ತು ವಿಡಿಯೋ ತುಣುಕುಗಳ ಮೂಲಕ ತರಬೇತಿ ನಡೆಸಿ ತರಬೇತಿಯ ಗುಣಮಟ್ಟ ಹೆಚ್ಚಿಸಲಾಯಿತು. ತರಬೇತಿ ಪಡೆದುಕೊಂಡಿರುವ ಬ್ಲಾಕ್ ಮಾಸ್ಟರ್ ಟ್ರೇನರ್‌ಗಳು ಆಯಾ ತಾಲೂಕುಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ನೋಡಲ್ ಅಧಿಕಾರಿಗಳೊಂದಿಗೆ ಉಳಿದ ಇಲಾಖೆಗಳು ಜಿಲ್ಲೆಯಲ್ಲಿ ಗುರುತಿಸಲಾದ 243 ಗ್ರಾಮಗಳಲ್ಲಿ ಮಾಹಿತಿಯನ್ನು ತಲುಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಿಳಿಸಲಾಯಿತು.

ಆದಿ ಕರ್ಮಯೋಗಿ ಅಭಿಯಾನ ತರಬೇತಿ ಕಾರ್ಯಾಗಾರದಲ್ಲಿ ಕತ್ತಲೆಯನು ಶಪಿಸಬೇಡಿ ಬೆಳಕನ್ನು ತನ್ನಿ ಎಂಬ ಇವೆಂಟ್‌ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ನವೀನ್‌ಕುಮಾರ ಅವರು ಚಾಲನೆ ನೀಡಿದರು. ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿರುವ 07 ಇಲಾಖೆಗಳು ತರಬೇತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯಗಳು, ತರಬೇತಿಯ ಉದ್ದೇಶಗಳು ಮತ್ತು ಯೋಜನೆಯ ದೂರದೃಷ್ಠಿಯ ಕುರಿತು ಬಿಇಓ ಕಚೇರಿ ಮಾನವಿಯ ಶಿಕ್ಷಣ ಸಂಯೋಜಕರಾದ ಶ್ರೀ ಮಹ್ಮದ್ ಯುನೂಸ್ ಅವರು ಪಿ.ಪಿ.ಟಿ. ಮೂಲಕ ತರಬೇತಿ ನೀಡಿದರು. ಜಿಲ್ಲಾಮಟ್ಟದ ಮಾಸ್ಟರ್ ಟ್ರೇನರ್‌ಗಳಾದ ರುಕ್ಮೀಣಿಬಾಯಿ, ಈಶ್ವರ ದಾಸಪ್ಪನವರ ಮತ್ತು ಧತ್ತಾತ್ರೇಯ ಅವರು ಮೂಡ್ ಮೀಟರ್ ಇವೆಂಟ್ ನಡೆಸಿಕೊಟ್ಟರು.

ಪ್ರಮಾಣ ಪತ್ರ ವಿತರಣೆ: ಆದಿ ಕರ್ಮಯೋಗಿ ಅಭಿಯಾನ ತರಬೇತಿ ಕಾರ್ಯಾಗಾರದಲ್ಲಿ 3 ದಿನಗಳವರೆಗೆ ಭಾಗವಹಿಸಿದ ತರಬೇತಿದಾರರಿಗೆ ಪ್ರಮಾಣ ನೀಡಲಾಯಿತು.

ಸಮಾರಂಭದಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಮಲ್ಲಿಕಾರ್ಜುನ ಎಸ್.ಅಯ್ಯನಗೌಡರ್, ಕೃಷಿ ವಿಶ್ವ ವಿದ್ಯಾಲಯದ ಉಪ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಡಾ.ರಾಜಣ್ಣ, ಮಾನವಿ ತಾಲೂಕಿನ ಬಿ.ಇ.ಓ ಚಂದ್ರಶೇಖರ ದೊಡ್ಮನಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande