ಬೆಂಗಳೂರು, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇಂದು ರಾತ್ರಿ 2022ರ ನಂತರದ ಅತಿ ಉದ್ದದ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಈ ವೇಳೆ ಮಧ್ಯರಾತ್ರಿ ಕೆಂಪು ಬಣ್ಣದ ಚಂದ್ರ ಗೋಚರಿಸಿ ಅದ್ಭುತ ದೃಶ್ಯ ಕಾಣಲಿದೆ.
ವಿಶ್ವ ಜನಸಂಖ್ಯೆಯ 85% ಜನರಿಗೆ ಇದು ಗೋಚರವಾಗಲಿದ್ದು, ಭಾರತ, ಆಸ್ಟ್ರೇಲಿಯಾ, ಏಷ್ಯಾ, ಆಫ್ರಿಕಾ ಹಾಗೂ ಯುರೋಪ್‌ನಲ್ಲೂ ಕಾಣಬಹುದು. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ.
ಭಾರತೀಯ ಕಾಲಮಾನ ಪ್ರಕಾರ, ಭಾಗಶಃ ಗ್ರಹಣ ರಾತ್ರಿ 09:57 ಆರಂಭವಾಗಲಿದೆ. ಸಂಪೂರ್ಣ ಗ್ರಹಣ ಆರಂಭ: ರಾತ್ರಿ 11:48, ಗರಿಷ್ಠ ಗ್ರಹಣ: ಮಧ್ಯರಾತ್ರಿ 12:22, ಭಾಗಶಃ ಗ್ರಹಣ ಬೆಳಿಗ್ಗೆ 01:26 ಅಂತ್ಯವಾಗಲಿದೆ.
ಒಟ್ಟು ಅವಧಿ ಸುಮಾರು 1 ಗಂಟೆ 22 ನಿಮಿಷಗಳು ಇರಲಿದೆ. ಇದನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದು, ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa