ನವದೆಹಲಿ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಚೀನಾದ ಜಿನಿಂಗ್‌ನಲ್ಲಿ ನಡೆದ 18ನೇ ಅಂತರರಾಷ್ಟ್ರೀಯ ಭೂ ವಿಜ್ಞಾನ ಒಲಿಂಪಿಯಾಡ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಒಟ್ಟು ಏಳು ಪದಕಗಳನ್ನು ಗೆದ್ದಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಭಾನುವಾರ ನವದೆಹಲಿಯಲ್ಲಿ ವಿಜೇತರನ್ನು ಸನ್ಮಾನಿಸಿದರು.
ಭಾರತ ಪಡೆದ ಪದಕಗಳಲ್ಲಿ 1 ಚಿನ್ನ, 4 ಬೆಳ್ಳಿ ಮತ್ತು 2 ಕಂಚುಗಳಿವೆ. ಜೊತೆಗೆ ಅಂತರರಾಷ್ಟ್ರೀಯ ಭೂವಿಜ್ಞಾನ ಯುವ ಚಳುವಳಿ ವರದಿಗಾರ ವಿಭಾಗದಲ್ಲೂ ಮೂರನೇ ಬಹುಮಾನವನ್ನೂ ಮುಡಿಗೇರಿಸಿಕೊಂಡಿದೆ.
ಲುಧಿಯಾನಾದ ರಯಾನ್ಶ್ ಗುಪ್ತಾ – 1 ಚಿನ್ನ, 1 ಬೆಳ್ಳಿ, 3ನೇ ಬಹುಮಾನ, ಕಪುರ್ತಲಾದ ಚಾರುವ್ರತ್ ಬೈನ್ಸ್ – 2 ಬೆಳ್ಳಿ, 1 ಕಂಚು, ಜೈಪುರದ ಅಪಮ್ ನಿಧಿ ಪಾಂಡೆ – 1 ಬೆಳ್ಳಿ, ದೆಹಲಿಯ ಪ್ರಿಯಾಂಶಿ ಘಂಘಾಸ್ – 1 ಕಂಚು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರೊ. ದೇವೇಶ್ ವಾಲಿಯಾ ಹಾಗೂ ಪ್ರೊ. ಹೇಮಾ ಅಚ್ಯುತನ್ ಮಾರ್ಗದರ್ಶನ ನೀಡಿದ್ದು, ಡಾ. ಜಗವೀರ್ ಸಿಂಗ್ ತಂಡದ ಮೇಲ್ವಿಚಾರಕರಾಗಿದ್ದರು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, ಈ ಸಾಧನೆ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದೆ. ಇದು ಭಾರತದ ಯುವಜನರಲ್ಲಿ, ವಿಶೇಷವಾಗಿ ಎರಡು ಮತ್ತು ಮೂರನೇ ಹಂತದ ನಗರಗಳ ವಿದ್ಯಾರ್ಥಿಗಳಲ್ಲಿ ಹೊಸ ಆಕಾಂಕ್ಷೆ ಮತ್ತು ಆತ್ಮವಿಶ್ವಾಸ ಮೂಡಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa