ಹರಿದ್ವಾರ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಚಂದ್ರಗ್ರಹಣಕ್ಕೆ ಮುಂಚಿನ ಸೂತಕ ಅವಧಿ ಪ್ರಾರಂಭವಾಗುವುದರಿಂದ, ಹರಿದ್ವಾರದ ಹರ್ ಕಿ ಪೌರಿಯಲ್ಲಿ ಸಾಮಾನ್ಯವಾಗಿ ಸಂಜೆ ನಡೆಯಲಿದ್ದ ಗಂಗಾ ಆರತಿಯನ್ನು ಮಧ್ಯಾಹ್ನ ನಡೆಸಲಾಯಿತು.
ಗಂಗಾ ಸಭಾದ ಪ್ರಧಾನ ಕಾರ್ಯದರ್ಶಿ ತನ್ಮಯ್ ವಶಿಷ್ಠ ಅವರು, “ವಿಶೇಷ ಖಗೋಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ರಾತ್ರಿ 9.57ಕ್ಕೆ ಪೂರ್ಣ ಚಂದ್ರಗ್ರಹಣ ಪ್ರಾರಂಭವಾಗಿ ಬೆಳಗಿನ ಜಾವ 1.27ರವರೆಗೆ ಮುಂದುವರಿಯಲಿದೆ. ಆದ್ದರಿಂದ ಸೂತಕ ಅವಧಿ ಪ್ರಾರಂಭವಾಗುವ ಮೊದಲು ಆರತಿ ಪೂರ್ಣಗೊಂಡು ದೇವಾಲಯದ ಬಾಗಿಲು ಮುಚ್ಚಲಾಯಿತು. ಚಂದ್ರಗ್ರಹಣ ಮುಗಿದ ನಂತರ ದೇವಾಲಯವನ್ನು ಗಂಗಾಜಲದಿಂದ ಶುದ್ಧೀಕರಿಸಿ ಮರುತೆರೆಯಲಾಗುವುದು” ಎಂದು ತಿಳಿಸಿದ್ದಾರೆ.
ಜ್ಯೋತಿಷಿ ಪಂಡಿತ್ ಪ್ರದೀಪ್ ಜೋಶಿ ಅವರು, ಧಾರ್ಮಿಕ ನಂಬಿಕೆಗಳ ಪ್ರಕಾರ ಸೂತಕ ಅವಧಿಯಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಇದೇ ಸಂದರ್ಭದಲ್ಲಿ ಪಿತೃಪಕ್ಷ ಆರಂಭವಾಗುತ್ತಿರುವುದರಿಂದ, ಭಕ್ತರು ಸೂತಕ ಪ್ರಾರಂಭವಾಗುವ ಮೊದಲು ಪಿಂಡದಾನ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa