ಛತ್ತೀಸ್‌ಗಢ : ಮಹಿಳಾ ನಕ್ಸಲ ಸೋಧಿ ವಿಮಲಾ ಪೋಲಿಸ್ ಗುಂಡಿಗೆ ಬಲಿ
ದಂತೇವಾಡ, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಅಬುಜ್ಮದ್ ಕಾಡಿನಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಮಹಿಳಾ ನಕ್ಸಲೈಟ್ ಸೋಧಿ ವಿಮಲಾ ಮೃತಪಟ್ಟಿದ್ದು. ಆಕೆಯ ಮೇಲೆ 8 ಲಕ್ಷ ರೂ. ಬಹುಮಾನ ಘೋಷಿಸಲ್ಪಟ್ಟಿತ್ತು ಎಂದು ಬಸ್ತಾರ್ ವಿಭಾಗದ ಐಜಿ ದೃಢಪಡಿಸಿದ್ದಾರೆ. ದಂತೇವಾಡ-ನಾರಾಯಣಪುರ ಗಡಿಭ
ಛತ್ತೀಸ್‌ಗಢ : ಮಹಿಳಾ ನಕ್ಸಲ ಸೋಧಿ ವಿಮಲಾ ಪೋಲಿಸ್ ಗುಂಡಿಗೆ ಬಲಿ


ದಂತೇವಾಡ, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಅಬುಜ್ಮದ್ ಕಾಡಿನಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಮಹಿಳಾ ನಕ್ಸಲೈಟ್ ಸೋಧಿ ವಿಮಲಾ ಮೃತಪಟ್ಟಿದ್ದು. ಆಕೆಯ ಮೇಲೆ 8 ಲಕ್ಷ ರೂ. ಬಹುಮಾನ ಘೋಷಿಸಲ್ಪಟ್ಟಿತ್ತು ಎಂದು ಬಸ್ತಾರ್ ವಿಭಾಗದ ಐಜಿ ದೃಢಪಡಿಸಿದ್ದಾರೆ.

ದಂತೇವಾಡ-ನಾರಾಯಣಪುರ ಗಡಿಭಾಗದ ಓರ್ಚಾ ಪೊಲೀಸ್ ಠಾಣಾ ವ್ಯಾಪ್ತಿಯ ಬೊಂಡೋಸ್, ನೆಂದೂರ್, ಗವಾಡಿ ಸೇರಿದಂತೆ ಸುತ್ತಮುತ್ತಲಿನ ಕಾಡಿನಲ್ಲಿ ನಕ್ಸಲರ ತಾತ್ಕಾಲಿಕ ಅಡಗುತಾಣಗಳಿದ್ದವು ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಶಸ್ತ್ರಸಜ್ಜಿತ ಪಡೆಗಳು ಕಾರ್ಯಾಚರಣೆ ನಡೆಸಿದವು. ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಿಪಿಸಿ ಕಾರ್ಯದರ್ಶಿ ಸೋಧಿ ವಿಮಲಾ ಹತ್ಯೆಯಾಗಿದ್ದಾಳೆ.

ಈಕೆ ಅನೇಕ ಹತ್ಯಾಕಾಂಡಗಳಲ್ಲಿ ಭಾಗಿಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ವಿಶೇಷವಾಗಿ, ಅಬುಜ್ಮದ್‌ನ ಕೌಶಾಲ್ನರ್ ಹಾಗೂ ಮಂಗನಾರ್ ಪ್ರದೇಶಗಳಲ್ಲಿ ಮಾಹಿತಿದಾರರೆಂದು ಗ್ರಾಮಸ್ಥರನ್ನು ಹತ್ಯೆ ಮಾಡಿದ ಪ್ರಕರಣಗಳಲ್ಲಿ ವಿಮಲಾ ಅವರ ಹೆಸರು ಕೇಳಿಬಂದಿತ್ತು.

ಸೈನಿಕರು ನಂತರ ನಡೆಸಿದ ಶೋಧದಲ್ಲಿ 303 ರೈಫಲ್, 315 ಬೋರ್ ರೈಫಲ್, 2 ಬಿಜಿಎಲ್ ಲಾಂಚರ್, ಇತರ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳು ಪತ್ತೆಯಾಗಿವೆ. ಸುಮಾರು 19 ಕೆಜಿ ಜೆಲೆಟಿನ್ ಸ್ಟಿಕ್‌ಗಳು ಕೂಡ ವಶವಾಗಿದ್ದು, ಅವುಗಳನ್ನು ಐಇಡಿ ತಯಾರಿಕೆಗೆ ಬಳಸಲಾಗುತ್ತಿತ್ತು.

ಈ ಕುರಿತು ಬಸ್ತಾರ್ ಐಜಿ ಸುದರ್‌ರಾಜ್ ಪಿ. ಮಾಹಿತಿ ನೀಡಿದ್ದು, ನಕ್ಸಲರು ನೆಂದೂರ್-ಗವಾಡಿ ಕಾಡಿನಲ್ಲಿ ಅಡಗುತಾಣ ಮಾಡಿಕೊಂಡಿದ್ದರು. ಪಡೆಗಳು ಹತ್ತಿರವಾದ ಕೂಡಲೇ ಗುಂಡಿನ ದಾಳಿ ನಡೆಸಿದರು. ಪ್ರತೀಕಾರದ ಕ್ರಮದಲ್ಲಿ ನಕ್ಸಲರು ಪರಾರಿಯಾಗಿದ್ದು, ಮಹಿಳಾ ನಕ್ಸಲ ವಿಮಲಾ ಗುಂಡಿಗೆ ಬಲಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande