ಅಬುಜಾ, 07 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಈಶಾನ್ಯ ನೈಜೀರಿಯಾದ ಬೊರ್ನೊ ರಾಜ್ಯದ ದಾರುಲ್ ಜಮಾಲ್ ಹಳ್ಳಿ ಮೇಲೆ ಬೊಕೊ ಹರಾಮ್ ಭಯೋತ್ಪಾದಕರು ಶುಕ್ರವಾರ ರಾತ್ರಿ ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 63 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ರಾಜ್ಯಪಾಲ ಬಾಬಗಾನಾ ಉಮಾರಾ ಜುಲುಮ್ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ದಾಳಿಯನ್ನು ಖಂಡಿಸಿದರು. ಬಲಿಯಾದವರಲ್ಲಿ 58 ನಾಗರಿಕರು ಹಾಗೂ 5 ಸೈನಿಕರು ಸೇರಿದ್ದಾರೆ. ದಾಳಿಯ ವೇಳೆ ಭಯೋತ್ಪಾದಕರು ಮನೆಗಳಿಗೆ ಬೆಂಕಿ ಹಚ್ಚಿ ಜನರನ್ನು ಕ್ರೂರವಾಗಿ ಕೊಂದಿದ್ದಾರೆ.
ಡೈಲಿ ಟ್ರಸ್ಟ್ ಪ್ರಕಾರ, ದಾಳಿ ನಡೆದ ಹಳ್ಳಿ ಇತ್ತೀಚೆಗೆ ಸ್ಥಳಾಂತರಗೊಂಡ ಜನರು ಮರಳಿದ ಪ್ರದೇಶವಾಗಿತ್ತು. ಹೀಗಾಗಿ ದಾಳಿಯಲ್ಲಿ ಅನೇಕರು ಬಲಿಯಾಗಿದ್ದಾರೆ. ಕೆಲವರು ಮಾತ್ರ ಜೀವ ಉಳಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa