ಲಿವರ್‌ಪೂಲ್, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.
೭೫ಕೆಜಿ ವಿಭಾಗದಲ್ಲಿ ಸುಮಿತ್ ಕುಂಡು ಜೋರ್ಡಾನ್‌ನ ಮೊಹಮ್ಮದ್ ಅಲ್ಹುಸೇನ್ ವಿರುದ್ಧ 5-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು. ಮುಂದಿನ ಹಂತದಲ್ಲಿ ಬಲ್ಗೇರಿಯಾದ ಪ್ಯಾರಿಸ್ ಒಲಿಂಪಿಯನ್ ರಾಮಿ ಕಿವಾನ್ ಅವರನ್ನು ಎದುರಿಸಲಿದ್ದಾರೆ.
೬೫ಕೆಜಿ ವಿಭಾಗದಲ್ಲಿ ನೀರಜ್ ಫೋಗಟ್ ಫಿನ್ಲೆಂಡ್‌ನ ಕ್ರಿಸ್ಟಾ ಕೊವಲೈನೆನ್ ವಿರುದ್ಧ 3-2 ಅಂತರದ ಕಠಿಣ ಗೆಲುವು ಸಾಧಿಸಿದರು. ಇದೀಗ ಇಂಗ್ಲೆಂಡ್‌ನ ಸಚಾ ಹಿಕ್ಕಿ ವಿರುದ್ಧ ಸೆಣಸಲಿದ್ದಾರೆ.
೫೭ಕೆಜಿ ವಿಭಾಗದಲ್ಲಿ ಜಾಸ್ಮಿನ್, ಉಕ್ರೇನ್‌ನ ಡೇರಿಯಾ-ಓಲ್ಹಾ ಹುಟಾರಿನಾ ವಿರುದ್ಧ 5-0 ಅಂತರದಿಂದ ಜಯಿಸಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಮುಂದಿನ ಹಂತದಲ್ಲಿ ಬ್ರೆಜಿಲ್‌ನ ಜುಸಿಲೆನ್ ಸೆರ್ಕ್ವೇರಾ ಅವರನ್ನು ಎದುರಿಸಲಿದ್ದಾರೆ.
೭೦ಕೆಜಿ ವಿಭಾಗದಲ್ಲಿ ಸನಮಾಚಾ, ಡೆನ್ಮಾರ್ಕ್‌ನ ಡಿಟ್ಟಿ ಫ್ರಾಸ್ತೋಲ್ಮ್ ವಿರುದ್ಧ 4-1 ಅಂತರದ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತಲುಪಿದರು. ಈಗ ಕಝಾಕಿಸ್ತಾನದ ನಟಾಲಿಯಾ ಬೊಗ್ಡಾನೋವಾ ಅವರನ್ನು ಎದುರಿಸಲಿದ್ದಾರೆ.
ಪುರುಷರ 90 ಕೆಜಿ ವಿಭಾಗದಲ್ಲಿ ಹರ್ಷ್ ಚೌಧರಿ ಪೋಲೆಂಡ್‌ನ ಆಡಮ್ ಟುಟಕ್ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa