ನವದೆಹಲಿ, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದೇಶೀಯ ಕಾರು ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಶುರುವಾಗಿದೆ. ಟಾಟಾ ಮೋಟಾರ್ಸ್, ಮಹೀಂದ್ರಾ & ಮಹೀಂದ್ರಾ ನಂತರ ಈಗ ರೆನಾಲ್ಟ್ ಇಂಡಿಯಾ ತನ್ನ ಕಾರುಗಳ ಬೆಲೆಯಲ್ಲಿ ₹96,395ರವರೆಗೆ ಕಡಿತ ಮಾಡುವುದಾಗಿ ಘೋಷಿಸಿದೆ.
ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಹೊಸ ದರಗಳು ಅನ್ವಯವಾಗಲಿವೆ. ಆದರೆ ಪರಿಷ್ಕೃತ ದರಗಳಲ್ಲಿ ಬುಕಿಂಗ್ ಈಗಾಗಲೇ ದೇಶಾದ್ಯಂತ ಆರಂಭವಾಗಿದೆ.
ರೆನಾಲ್ಟ್ ಕ್ವಿಡ್ ಇದೀಗ ₹4.29 ಲಕ್ಷದಿಂದ (ಎಕ್ಸ್-ಶೋರೂಂ, ದೆಹಲಿ) ಪ್ರಾರಂಭವಾಗಲಿದ್ದು, ಕಿಗರ್ ಮತ್ತು ಟ್ರೈಬರ್ ಮಾದರಿಗಳ ಆರಂಭಿಕ ಬೆಲೆ ₹5.76 ಲಕ್ಷ ನಿಗದಿಯಾಗಿದೆ. ಮಾದರಿಯನ್ನು ಅವಲಂಬಿಸಿ ಬೆಲೆ ಕಡಿತ ₹40,095ರಿಂದ ₹96,395ರವರೆಗೆ ಇರುತ್ತದೆ.
“ಜಿಎಸ್‌ಟಿ 2.0 ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ನೀಡುವುದು ನಮ್ಮ ಬದ್ಧತೆ. ಹಬ್ಬದ ಋತುವಿನಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಇದು ನೆರವಾಗಲಿದೆ” ಎಂದು ರೆನಾಲ್ಟ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ವೆಂಕಟ್ರಾಮ್ ಮಾಮಿಲ್ಲಪಲ್ಲೆ ಹೇಳಿದ್ದಾರೆ.
ಟಾಟಾ ಮೋಟಾರ್ಸ್ ಈಗಾಗಲೇ ₹1.40 ಲಕ್ಷದವರೆಗೆ ಕಡಿತ ಘೋಷಿಸಿದರೆ, ಮಹೀಂದ್ರಾ & ಮಹೀಂದ್ರಾ ₹1.56 ಲಕ್ಷದವರೆಗೆ ಕಡಿತ ನೀಡಿದೆ. ಮಾರುತಿ ಸುಜುಕಿ ಕೂಡ ಶೀಘ್ರದಲ್ಲೇ ಬೆಲೆ ಕಡಿತ ಘೋಷಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa