ವಾಷಿಂಗ್ಟನ್, 06 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಜಾರ್ಜಿಯಾ ರಾಜ್ಯದ ಹುಂಡೈ ವಿದ್ಯುತ್ ವಾಹನ ಬ್ಯಾಟರಿ ಸ್ಥಾವರದಿಂದ ವಲಸೆ ಅಧಿಕಾರಿಗಳು 475 ಕಾರ್ಮಿಕರನ್ನು ಬಂಧಿಸಿದ್ದಾರೆ.
ಬಂಧಿತರು ದಕ್ಷಿಣ ಕೊರಿಯಾದ ಪ್ರಮುಖ ಬ್ಯಾಟರಿ ತಯಾರಕ ಎಲ್‌ಜಿ ಎನರ್ಜಿ ಸೊಲ್ಯೂಷನ್ ಸಂಸ್ಥೆಯ ಅಂಗಸಂಸ್ಥೆಗಳ ಉದ್ಯೋಗಿಗಳು ಎಂದು ತಿಳಿದು ಬಂದಿದೆ.
ಈ ದಾಳಿ ಅಮೆರಿಕದ ತಾಯ್ನಾಡು ಭದ್ರತಾ ಇಲಾಖೆಯ ಅತಿ ದೊಡ್ಡ ಜಾರಿ ಕಾರ್ಯಾಚರಣೆಯೊಂದಾಗಿ ಪರಿಗಣಿಸಲಾಗಿದೆ.
ಕಾರ್ಮಿಕರು ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವಾಲಯ, ಬಂಧಿತರಲ್ಲಿ ತಮ್ಮ ದೇಶದ ಪ್ರಜೆಗಳೂ ಸೇರಿದ್ದಾರೆ ಎಂದು ದೃಢಪಡಿಸಿದೆ.
ಘಟನೆಯ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಮತ್ತು ಅಟ್ಲಾಂಟಾದಲ್ಲಿರುವ ರಾಯಭಾರ ಕಚೇರಿಗಳಿಂದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ಅಮೇರಿಕಾದ ಈ ಕ್ರಮದಿಂದ $7.6 ಬಿಲಿಯನ್ ಮೌಲ್ಯದ ಹುಂಡೈ ಇವಿ ಕಾರ್ಖಾನೆ ಯೋಜನೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಡೆಮೋಕ್ರಾಟ್ ಪಕ್ಷದ ಪ್ರತಿನಿಧಿ ಸ್ಯಾಮ್ ಪಾರ್ಕ್ ಈ ಕ್ರಮವನ್ನು ರಾಜಕೀಯ ಪ್ರೇರಿತ ದಾಳಿ ಎಂದು ಟೀಕಿಸಿದ್ದಾರೆ.
ಘಟನೆಯು ಅಮೆರಿಕಾ–ದಕ್ಷಿಣ ಕೊರಿಯಾ ನಡುವಿನ ಸಂಬಂಧಗಳ ಮೇಲೆ ಪ್ರಭಾವ ಬೀರುವ ಆತಂಕ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa