ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜನರು ಕಾಗದದ ಕೆಲಸ ಮತ್ತು ತೆರಿಗೆ ಭಾರದಿಂದ ನರಳುತ್ತಿದ್ದರು, ಆದರೆ ಮೋದಿ ಸರ್ಕಾರದ ಜಿಎಸ್‌ಟಿ ಸರಳಿಕರಣದ ಮೂಲಕ ಈ ಹೊರೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
2017ರಲ್ಲಿ ಪ್ರಧಾನಿ ಮೋದಿ ಜಿಎಸ್‌ಟಿ ಜಾರಿಗೊಳಿಸಿದ ಬಳಿಕ ತೆರಿಗೆ ವ್ಯವಸ್ಥೆ ಸರಳಗೊಂಡು ದರಗಳು ಕಡಿಮೆಯಾಗಿವೆ, ಗ್ರಾಹಕರಿಗೆ ನಿರಂತರವಾಗಿ ಲಾಭವಾಗುತ್ತಿದೆ ಎಂದು ಅವರು ಹೇಳಿದರು.
ಯುಪಿಎ ಕಾಲದಲ್ಲಿ ಅಬಕಾರಿ ಸುಂಕ, ವ್ಯಾಟ್, ಕೇಂದ್ರ ಮಾರಾಟ ತೆರಿಗೆ ಸೇರಿ 30% ಕ್ಕಿಂತ ಹೆಚ್ಚು ತೆರಿಗೆ ಇತ್ತು ಎಂದು ಗೋಯಲ್ ಆರೋಪಿಸಿದರು.
ಜಿಎಸ್‌ಟಿ ಪರಿಚಯದಿಂದ ವ್ಯವಹಾರ ಸುಗಮವಾಗಿದ್ದು, ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಸೆಪ್ಟೆಂಬರ್ 22ರಂದು, ನವರಾತ್ರಿಯ ಮೊದಲ ದಿನ, ಪ್ರತಿಯೊಬ್ಬ ವರ್ಗಕ್ಕೂ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa