ನವದೆಹಲಿ, 05 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ನಿರ್ಲಕ್ಷಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಯೋಜನೆ 20 ವರ್ಷ ಪೂರೈಸಿದರೂ ಬಜೆಟ್ ಹೆಚ್ಚಳವಾಗದೇ, ಐದು ತಿಂಗಳಲ್ಲಿ 60% ಖರ್ಚಾಗಿರುವುದನ್ನು ಅವರು ಗಂಭೀರವೆಂದು ಹೇಳಿದ್ದಾರೆ.
ಕಳೆದ 11 ವರ್ಷಗಳಿಂದ ಸಮರ್ಪಕ ನಿಧಿ ನೀಡದೇ, ವೇತನ ಪಾವತಿಯಲ್ಲಿ ವಿಳಂಬ ಸಾಮಾನ್ಯವಾಗಿದೆ ಎಂದು ರಮೇಶ್ ದೂರಿದ್ದಾರೆ. ಎನ್ಎಂಎಂಎಸ್ ಹಾಗೂ ಎಬಿಪಿಎಸ್ ವ್ಯವಸ್ಥೆಯಿಂದ 2 ಕೋಟಿ ಕಾರ್ಮಿಕರಿಗೆ ಕೆಲಸ–ವೇತನ ಸಿಗದೇ ಹೋದ ಉದಾಹರಣೆ ನೀಡಿದ ಅವರು, ದಿನಗೂಲಿ ನೌಕರರ ಕನಿಷ್ಠ ವೇತನ 400 ರೂ. ಆಗಬೇಕೆಂದು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa