ಇಂಫಾಲ್, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಣಿಪುರದಲ್ಲಿ ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಬಂಧಿಸುವುದರ ಜೊತೆಗೆ 184.13 ಕೆಜಿ ಗಾಂಜಾ ಮತ್ತು ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಬಂಧಿತರು ಕೆಸಿಪಿ (ಸಿಟಿ ಮೈಟೈ), ಕೆಸಿಪಿ (ಪಿಡಬ್ಲ್ಯೂಜಿ) ಹಾಗೂ ಪಿಎಲ್‌ಎ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.
ಮೊದಲ ಹಂತದಲ್ಲಿ ಕೆಸಿಪಿ (ಸಿಟಿ ಮೈಟೈ)ಯ ಇಬ್ಬರು ಕಾರ್ಯಕರ್ತರು – ಲೈಶ್ರಾಮ್ ಸುರಂಜೋಯ್ ಮೈಟೈ ಅಲಿಯಾಸ್ ಥೋಯ್ (28) ಮತ್ತು ಫಿಜಾಮ್ ಅಥಾಲು ಮೈಟೈ (26) ಬಂಧಿತರಾಗಿದ್ದು, ಅವರಿಂದ ಎರಡು ಮೊಬೈಲ್‌ಗಳು ವಶಪಡಿಸಿಕೊಳ್ಳಲಾಗಿದೆ.
ಪಿಎಲ್‌ಎ ಸಂಘಟನೆಯ ಕಂಗುಜಮ್ ನೊಂಗ್ಮೈಖೋಂಬಾ ಮೈಟೈ (50) ಎಂಬಾತನನ್ನೂ ಬಂಧಿಸಲಾಗಿದ್ದು, ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದ ಅವನಿಂದ ಮೊಬೈಲ್, ಸಿಮ್ ಕಾರ್ಡ್‌ಗಳು ಹಾಗೂ ಸ್ಕೂಟಿ ವಶಕ್ಕೆ ಪಡೆಯಲಾಗಿದೆ.
ಇದೇ ರೀತಿ ಕೆಸಿಪಿ (ಪಿಡಬ್ಲ್ಯೂಜಿ)ಯ ಯುಮ್ನಾಮ್ ಸುರ್ಚಂದ್ರ ಸಿಂಗ್ (35) ಅಲಿಯಾಸ್ ಸುರ್ ಮತ್ತು ಹಾರೊಂಗ್‌ಬಮ್ ಟೊಂಬಾ ಮೈಟೈ (29) ಬಂಧಿತರಾಗಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಬಿಷ್ಣುಪುರ ಜಿಲ್ಲೆಯ ಖೋಮ್‌ಡ್ರಾಮ್ ದೇಬೆನ್ ಮೈಟೈ (43) ಬಂಧಿತನಾಗಿದ್ದು, ಅವನಿಂದ 184.13 ಕೆಜಿ ಗಾಂಜಾ, ಸಾಗಣೆಗೆ ಬಳಸಿದ ಟಾಟಾ ಟ್ರಕ್, ಮೊಬೈಲ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯಾದ್ಯಂತ ದಂಗೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಗಳ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa