ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 56ನೇ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯ ಜನರ ಜೀವನಕ್ಕೆ ನೇರ ಸಂಬಂಧವಿರುವ ದಿನನಿತ್ಯ ಬಳಕೆಯ ವಸ್ತುಗಳ ಮೇಲಿನ ಜಿಎಸ್ಟಿ ದರ ಕಡಿತಗೊಂಡಿದ್ದು, ಈ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಜಿಎಸ್ಟಿ ವ್ಯವಸ್ಥೆಯಲ್ಲಿ ಶೇ. 5 ಮತ್ತು ಶೇ. 18ರ ಎರಡು ಹಂತದ ತೆರಿಗೆ ರಚನೆ ಅನುಮೋದನೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖ ಬದಲಾವಣೆಗಳು:
ಶೂನ್ಯ GST: ಚೆನ್ನಾ, ಪನೀರ್, ರೊಟ್ಟಿ, ಪರಾಠ, ಜೀವ ಉಳಿಸುವ ಔಷಧಿ.
ದರ ಕಡಿತ (12%/18% ರಿಂದ 5% ಗೆ): ಹೇರ್ ಆಯಿಲ್, ಸೋಪ್, ಸೈಕಲ್.
ವಿಮೆಗಳ ಮೇಲಿನ ವಿನಾಯಿತಿ: ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಪ್ರೀಮಿಯಂ.
ಶೂಗಳು:
ರೂ. 2500 ಕ್ಕಿಂತ ಕಡಿಮೆ ಬೆಲೆಯ ಶೂಗಳಿಗೆ 5%.
ರೂ. 2500 ಕ್ಕಿಂತ ಹೆಚ್ಚಿನ ಬೆಲೆಯ ಶೂಗಳಿಗೆ 18%.
ವಾಹನಗಳು:
ಸಣ್ಣ ಕಾರುಗಳು (ಪೆಟ್ರೋಲ್ ಎಂಜಿನ್ 1200 ಸಿಸಿ, ಡೀಸೆಲ್ ಎಂಜಿನ್ 1500 ಸಿಸಿ ಒಳಗೆ) ಹಾಗೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 18%.
ಇತರ ಎಲ್ಲಾ ಕಾರುಗಳಿಗೆ 40%.
ತಂಬಾಕು ಉತ್ಪನ್ನಗಳು, ಪಾನ್ ಮಸಾಲ ಮತ್ತು ಸಿಗರೇಟ್: 40% ವಿಶೇಷ ದರದ GST.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa