ನವದೆಹಲಿ, 04 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಿಎಸ್‌ಟಿ ಮಂಡಳಿಯು 12% ಮತ್ತು 28% ಸ್ಲ್ಯಾಬ್‌ಗಳನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡ ಪ್ರಧಾನಿಯವರು, “ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜಿಎಸ್‌ಟಿ ಸುಧಾರಣೆಗಳ ಕುರಿತು ನಾನು ಉಲ್ಲೇಖಿಸಿದ್ದೆ. ಇದೀಗ ಜಿಎಸ್‌ಟಿ ದರ ಬದಲಾವಣೆಯ ಮೂಲಕ ಸಾಮಾನ್ಯ ಜನರು, ರೈತರು ಮತ್ತು ಮಧ್ಯಮ ವರ್ಗದವರಿಗೆ ನೇರ ಪ್ರಯೋಜನ ದೊರೆಯಲಿದೆ” ಎಂದು ಹೇಳಿದ್ದಾರೆ.
ಹಣದುಬ್ಬರದ ಹೊರೆ ಅನುಭವಿಸುತ್ತಿರುವ ಸಾಮಾನ್ಯ ಜನರಿಗೆ ಈ ತೀರ್ಮಾನವು ಪರಿಹಾರ ನೀಡುವುದರೊಂದಿಗೆ, ಆರ್ಥಿಕತೆಯನ್ನು ಬಲಪಡಿಸುವ ಒಂದು ಹೆಜ್ಜೆಯಾಗಿದೆ. ಜನಜೀವನ ಸುಲಭಗೊಳಿಸುವ ಮತ್ತು ಆರ್ಥಿಕ ಸುಧಾರಣೆಗೆ ಬುನಾದಿ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ತರ್ಕಬದ್ಧ ಕರಡು ಸಿದ್ಧಪಡಿಸಿತ್ತು. ಅದನ್ನು ಜಿಎಸ್‌ಟಿ ಮಂಡಳಿ ಏಕಮತದಿಂದ ಅನುಮೋದಿಸಿರುವುದು ಸಂತೋಷದ ವಿಚಾರ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa