ಮೂರು ಪಡೆಗಳ ಒಗ್ಗಟ್ಟಿನಿಂದ ಸವಾಲು ಎದುರಿಸಲು ಸಾಧ್ಯ : ರಾಜನಾಥ ಸಿಂಗ್
ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭಾರತ ಎದುರಿಸುತ್ತಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಮೂರು ಪಡೆಗಳು ಒಟ್ಟಿಗೆ ಕೆಲಸ ಮಾಡುವುದು ಅತ್ಯವಶ್ಯಕ. ನಮ್ಮ ಮುಂದಿನ ಹೆಜ್ಜೆ ಅಖಿಲ ಭಾರತ ಮಟ್ಟದಲ್ಲಿ ತ್ರಿ-ಸೇವಾ ಲಾಜಿಸ್ಟಿಕ್ಸ್ ಏಕೀಕರಣದತ್ತ ಇರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ
Rajnath singh


ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭಾರತ ಎದುರಿಸುತ್ತಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಮೂರು ಪಡೆಗಳು ಒಟ್ಟಿಗೆ ಕೆಲಸ ಮಾಡುವುದು ಅತ್ಯವಶ್ಯಕ. ನಮ್ಮ ಮುಂದಿನ ಹೆಜ್ಜೆ ಅಖಿಲ ಭಾರತ ಮಟ್ಟದಲ್ಲಿ ತ್ರಿ-ಸೇವಾ ಲಾಜಿಸ್ಟಿಕ್ಸ್ ಏಕೀಕರಣದತ್ತ ಇರಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ನವದೆಹಲಿಯಲ್ಲಿ ನಡೆದ ತ್ರಿ-ಸೇನಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸವಾಲುಗಳು ದೊಡ್ಡದಾಗಿದ್ದಾಗ ಸಮಗ್ರ ಶಕ್ತಿ ಅಜೇಯವಾಗುತ್ತದೆ. ಮಾ ದುರ್ಗಾ ಅದಕ್ಕೆ ಉತ್ತಮ ಉದಾಹರಣೆ. ನಮ್ಮ ಪಡೆಗಳು ಒಟ್ಟಾಗಿ ಚಲಿಸಿದಾಗ ಶಕ್ತಿ ಬಹುಗುಣವಾಗುತ್ತದೆ ಎಂದರು.

ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂಧೂರ್ ಯಶಸ್ಸನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್, ವಾಯುಪಡೆಯ ಇಂಟಿಗ್ರೇಟೆಡ್ ಏರ್ ಕಮಾಂಡ್, ಸೇನೆಯ ಆಕಾಶ್ ಆರೋ ಹಾಗೂ ನೌಕಾಪಡೆಯ ಟ್ರಿಗನ್ ವ್ಯವಸ್ಥೆಗಳು ಸಮನ್ವಯಗೊಂಡಿದ್ದರಿಂದ ನಿರ್ಣಾಯಕ ಗೆಲುವು ಸಾಧ್ಯವಾಯಿತು. ಇದರಿಂದ ತ್ರಿ-ಸೇವಾ ಸಿನರ್ಜಿಯ ಮಹತ್ವ ಸ್ಪಷ್ಟವಾಯಿತು ಎಂದರು.

21ನೇ ಶತಮಾನದಲ್ಲಿ ಭದ್ರತಾ ಪರಿಸ್ಥಿತಿಗಳು ಸಂಕೀರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಿ, ಸಮುದ್ರ, ವಾಯು, ಬಾಹ್ಯಾಕಾಶ ಹಾಗೂ ಸೈಬರ್ ಕ್ಷೇತ್ರಗಳ ನಡುವೆ ನಿಕಟ ಸಂಬಂಧ ಬೆಳೆದಿದ್ದು, ಸೈಬರ್ ದಾಳಿ ಮತ್ತು ಮಾಹಿತಿ ಯುದ್ಧದ ಬೆದರಿಕೆಯನ್ನು ನಾವು ಎದುರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಮಾನದಂಡಗಳನ್ನು ಸ್ಥಾಪಿಸಿ, ಮೂರು ಪಡೆಗಳ ಸೈಬರ್ ರಕ್ಷಣಾ ವ್ಯವಸ್ಥೆಗಳನ್ನು ಏಕೀಕರಣಗೊಳಿಸಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande