ಜಾಗತಿಕ ಮಾರುಕಟ್ಟೆಗಳಿಂದ ಸಕಾರಾತ್ಮಕ ಸಂದೇಶ
ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಮೆರಿಕ ಹಾಗೂ ಯುರೋಪಿಯನ್ ಮಾರುಕಟ್ಟೆಗಳು ಹಿಂದಿನ ವಹಿವಾಟಿನಲ್ಲಿ ಏರಿಕೆಯೊಂದಿಗೆ ಮುಕ್ತಾಯವಾದ ನಂತರ ಜಾಗತಿಕ ಮಾರುಕಟ್ಟೆಗಳು ಇಂದು ಬಲದ ಲಕ್ಷಣ ತೋರಿಸುತ್ತಿವೆ. ಡೌ ಜೋನ್ಸ್ ಫ್ಯೂಚರ್ಸ್ ಶೇಕಡಾ 0.05 ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ. ಯುರೋಪಿಯ
Global market


ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಮೆರಿಕ ಹಾಗೂ ಯುರೋಪಿಯನ್ ಮಾರುಕಟ್ಟೆಗಳು ಹಿಂದಿನ ವಹಿವಾಟಿನಲ್ಲಿ ಏರಿಕೆಯೊಂದಿಗೆ ಮುಕ್ತಾಯವಾದ ನಂತರ ಜಾಗತಿಕ ಮಾರುಕಟ್ಟೆಗಳು ಇಂದು ಬಲದ ಲಕ್ಷಣ ತೋರಿಸುತ್ತಿವೆ. ಡೌ ಜೋನ್ಸ್ ಫ್ಯೂಚರ್ಸ್ ಶೇಕಡಾ 0.05 ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.

ಯುರೋಪಿಯನ್ ಮಾರುಕಟ್ಟೆಗಳಲ್ಲಿ ಎಫ್ಟಿಎಸ್ಸಿ (0.16%), ಸಿಎಸಿ (0.13%) ಮತ್ತು ಡಿಎಎಕ್ಸ (0.02%) ಸ್ವಲ್ಪ ಏರಿಕೆ ಕಂಡಿವೆ. ಏಷ್ಯನ್ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ನಡೆಯುತ್ತಿದ್ದು, ನಿಕ್ಕಿ (0.07%), ತೈವಾನ್ (1.29%), ಶಾಂಘೈ (0.40%) ಹಸಿರು ವಲಯದಲ್ಲಿವೆ. ಹ್ಯಾಂಗ್ ಸೆಂಗ್ (0.11%), ಕೋಸ್ಪಿ (0.07%) ಹಾಗೂ ಜಕಾರ್ತಾ (0.21%) ಕುಸಿತ ಕಂಡಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande