ಡ್ರೀಮ್ ಡ್ಯಾಶ್ 2025 ಫೈನಲ್ : ಹೆರಿಟೇಜ್ ಶಾಲೆಗೆ 10 ಪದಕ
ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗುರುಗ್ರಾಮದ ಹೆರಿಟೇಜ್ ಎಕ್ಸ್‌ಪೀರಿಯೆನ್ಶಿಯಲ್ ಲರ್ನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಡ್ರೀಮ್ ಡ್ಯಾಶ್ 2025 ರಾಷ್ಟ್ರೀಯ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಒಟ್ಟು 10 ಪದಕಗಳನ್ನು ಗೆದ್ದಿದ್ದಾರೆ. ದೇಶದ 15 ನಗರಗಳ 400ಕ್ಕೂ ಹೆಚ್ಚು ಶಾಲೆಗಳ 7,00
Dream dash


ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗುರುಗ್ರಾಮದ ಹೆರಿಟೇಜ್ ಎಕ್ಸ್‌ಪೀರಿಯೆನ್ಶಿಯಲ್ ಲರ್ನಿಂಗ್ ಸ್ಕೂಲ್ ವಿದ್ಯಾರ್ಥಿಗಳು ಡ್ರೀಮ್ ಡ್ಯಾಶ್ 2025 ರಾಷ್ಟ್ರೀಯ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಒಟ್ಟು 10 ಪದಕಗಳನ್ನು ಗೆದ್ದಿದ್ದಾರೆ.

ದೇಶದ 15 ನಗರಗಳ 400ಕ್ಕೂ ಹೆಚ್ಚು ಶಾಲೆಗಳ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ, ಪ್ರತ್ಯೂಷ್ ನಾಯಕ್ ಮತ್ತು ಶುಭ್ ಮಂತ್ರಿ 100 ಮೀ. ಹಾಗೂ 200 ಮೀ. ಓಟಗಳಲ್ಲಿ ಚಿನ್ನ ಗೆದ್ದಿದ್ದಾರೆ.

ನಂದಿಕಾ ಜೈನ್, ರಿನೈರಾ ದಲಾಲ್, ಅವನಿ ಅಗರ್ವಾಲ್, ಸೆಹರ್ ಅರೋರಾ ಮತ್ತು ಅಯಾನ್ ನಥಾನಿ ತಲಾ ಪದಕಗಳೊಂದಿಗೆ ಶಾಲೆಗೆ ಕೀರ್ತಿ ತಂದಿದ್ದಾರೆ.

ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಅವರ ಉಪಸ್ಥಿತಿ ಯುವ ಕ್ರೀಡಾಪಟುಗಳಿಗೆ ಮಹತ್ತರ ಸ್ಫೂರ್ತಿಯಾಯಿತು. ಶಾಲೆಯ ನಿರ್ದೇಶಕಿ ನೀನಾ ಕೌಲ್ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande