ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಐತಿಹಾಸಿಕ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರ್ ಯಶಸ್ಸಿಗೆ ಹೋಲಿಸಿ ಅಭಿನಂದಿಸಿದ್ದಾರೆ.
ಪಂದ್ಯದ ಬಳಿಕ, ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸನಲ್ಲಿ, ಕ್ರಿಕೆಟ್ ಮೈದಾನದಲ್ಲಿ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ ಆಗಿದೆ. ನಮ್ಮ ಕ್ರಿಕೆಟಿಗರಿಗೆ ಅನೇಕ ಅಭಿನಂದನೆಗಳು ಎಂದು ಬರೆದು, ಆಟಗಾರರ ಸಮರ್ಪಣೆ ಮತ್ತು ತಂತ್ರವನ್ನು ಶ್ಲಾಘಿಸಿದರು. ಈ ಜಯ ದೇಶದ ಹೆಮ್ಮೆ ಹೆಚ್ಚಿಸಿದೆ ಎಂದು ಅವರು ಹೇಳಿದರು.
ಮೋದಿ ಅವರ ಹೇಳಿಕೆಯನ್ನು ಕ್ರಿಕೆಟ್ ಮೈದಾನದ ವಿಜಯ ಮತ್ತು ಭಯೋತ್ಪಾದನೆ ವಿರುದ್ಧದ ಯಶಸ್ವಿ ಕಾರ್ಯಾಚರಣೆಯೊಂದಿಗೆ ಜೋಡಿಸಿದ ಸಂಕೇತಾತ್ಮಕ ಸಂದೇಶವೆಂದು ವಿಶ್ಲೇಷಿಸಲಾಗಿದೆ.
ಗಮನಾರ್ಹವಾಗಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಆರಂಭಿಸಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ನಾಶಮಾಡಿತ್ತು. ಅದೇ ರೀತಿಯ ನಿರ್ಣಾಯಕ ಜಯವನ್ನು ಕ್ರಿಕೆಟ್ ಮೈದಾನದಲ್ಲೂ ಭಾರತ ಸಾಧಿಸಿದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa