ಬಿಜೆಪಿ ನಾಯಕ ಪ್ರಿತು ಮಹಾದೇವ್ ವಿವಾದಾತ್ಮಕ ಹೇಳಿಕೆ : ಕಾಂಗ್ರೆಸ್ ಆಕ್ರೋಶ
ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಲಯಾಳಂ ಟಿವಿ ಚಾನೆಲ್‌ನಲ್ಲಿ ನಡೆದ ಚರ್ಚೆಯ ವೇಳೆ ಬಿಜೆಪಿ ನಾಯಕ ಪ್ರಿತು ಮಹಾದೇವ್ ನೀಡಿದ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮಹಾದೇವ್ ವಿರುದ್ಧ ತಕ್ಷಣ ಕ್ರಮ
ಬಿಜೆಪಿ ನಾಯಕ ಪ್ರಿತು ಮಹಾದೇವ್ ವಿವಾದಾತ್ಮಕ ಹೇಳಿಕೆ : ಕಾಂಗ್ರೆಸ್ ಆಕ್ರೋಶ


ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಲಯಾಳಂ ಟಿವಿ ಚಾನೆಲ್‌ನಲ್ಲಿ ನಡೆದ ಚರ್ಚೆಯ ವೇಳೆ ಬಿಜೆಪಿ ನಾಯಕ ಪ್ರಿತು ಮಹಾದೇವ್ ನೀಡಿದ ವಿವಾದಾತ್ಮಕ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮಹಾದೇವ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಇಮ್ರಾನ್ ಪ್ರತಾಪ್‌ಗಢಿ ಈ ಕುರಿತು ಎಕ್ಸ ಖಾತೆಯಲ್ಲಿ ವೀಡಿಯೊ ಹಂಚಿಕೊಂಡು, ಮಹಾತ್ಮ ಗಾಂಧಿ ಮತ್ತು ಇಂದಿರಾ ಗಾಂಧಿಯವರಂತೆಯೇ, ರಾಹುಲ್ ಗಾಂಧಿಯವರ ಮೇಲೂ ಪಿತೂರಿ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಪಕ್ಷದ ನಾಯಕರ ಭದ್ರತೆಯ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳುತ್ತಿರುವುದೇಕೆ?” ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪ್ರತಾಪ್‌ಗಢಿ ಒತ್ತಾಯಿಸಿದ್ದು, ಇಡೀ ದೇಶ ಈ ಬೆದರಿಕೆಯ ಬಗ್ಗೆ ಮೌನವಾಗಿದೆ. ಆದರೆ ಬಿಜೆಪಿ ನಾಯಕರು ಟಿವಿ ಚರ್ಚೆಯ ವೇದಿಕೆಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, ವಿರೋಧ ಪಕ್ಷಗಳು ಸೈದ್ಧಾಂತಿಕವಾಗಿ ಸೋತಾಗ, ದೈಹಿಕ ಹಿಂಸೆಗೆ ಮೊರೆ ಹೋಗುತ್ತವೆ. ಗೋಡ್ಸೆ ಮಹಾತ್ಮ ಗಾಂಧಿಯನ್ನು ಕೊಂದಿದ್ದಾನೆ. ಇಂದು ಬಿಜೆಪಿ ನಾಯಕರು ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ಬೆದರಿಸುತ್ತಿದ್ದಾರೆ. ಇದು ಲಕ್ಷಾಂತರ ಬಡವರು ಮತ್ತು ಅಂಚಿನಲ್ಲಿರುವ ಜನರ ಧ್ವನಿಯನ್ನು ಹತ್ತಿಕ್ಕುವ ಬೃಹತ್ ಪಿತೂರಿಯಾಗಿದೆ ಎಂದು ಬರೆದಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಈ ಹೇಳಿಕೆಯನ್ನು “ಲೆಕ್ಕಾಚಾರದ ಬೆದರಿಕೆ” ಮತ್ತು ರಾಹುಲ್ ಗಾಂಧಿಯವರ ಸುರಕ್ಷತೆಗೆ “ಗಂಭೀರ ಅಪಾಯ” ಎಂದು ಕರೆದಿದ್ದಾರೆ. “ಇಂತಹ ಮಾತುಗಳು ಪ್ರತಿ ಪಕ್ಷದ ನಾಯಕರು ಹಾಗೂ ಸಾಮಾನ್ಯ ನಾಗರಿಕರಿಗೆ ನೀಡಲಾಗುವ ಭದ್ರತಾ ಭರವಸೆಯ ಮೇಲೂ ಪ್ರಶ್ನೆ ಎತ್ತುತ್ತವೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮಲಯಾಳಂ ಚಾನೆಲ್‌ನಲ್ಲಿ ಲಡಾಖ್ ಹಿಂಸಾಚಾರದ ಕುರಿತ ಚರ್ಚೆಯ ವೇಳೆ ಮಹಾದೇವ್ ನೀಡಿದ ಹೇಳಿಕೆಯೇ ಈ ವಿವಾದಕ್ಕೆ ಕಾರಣ. ಪ್ರಿತು ಮಹಾದೇವ್ ಅವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೇರಳ ಘಟಕದ ಮಾಜಿ ಅಧ್ಯಕ್ಷರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande