ಧರ್ಮಸ್ಥಳ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಧರ್ಮಸ್ಥಳ ಕ್ಷೇತ್ರದ ಸತ್ಯ ದರ್ಶನವಾಗಿದೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಸತ್ಯ ದರ್ಶನ ಸಮಾವೇಶದಲ್ಲಿ ಮಾತಾಡಿದ ವೀರೇಂದ್ರ ಹೆಗ್ಗಡೆ ಎಸ್ಐಟಿ ತನಿಖೆ ನಡೆಯದಿದ್ದಿದರೆ ಸತ್ಯ ಹೊರಗೆ ಬರುತ್ತಿರಲಿಲ್ಲ ಎಂದಿದ್ದಾರೆ.
ಬೇರೆ ಬೇರೆ ಜಿಲ್ಲೆಯಿಂದ ಸಾವಿರಾರು ಜನ ಬಂದು ಬೆಂಬಲ ತೋರಿದ್ದಾರೆ. ನಮ್ಮ ತಾಲೂಕಿನವರು ಯಾಕೆ ಬಂದಿಲ್ಲ ಎಂಬ ಮಾತು ಇತ್ತು. ಆದರೆ ಇವತ್ತು ಆ ಮಾತು ದೂರ ಆಗಿದೆ. ಬೆಳ್ತಂಗಡಿ ತಾಲೂಕು ಜನತೆ ಬಂದು ಕೃತಜ್ಞತೆ ತೋರಿದ್ದೀರಿ. ಎಸ್ಐಟಿ ಮಾಡಿದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮೊದಲ ದಿನವೇ ನಾವು ಎಸ್ಐಟಿ ರಚನೆ ಮಾಡಿದ್ದನ್ನು ಸ್ವಾಗತ ಮಾಡಿದ್ದೇವೆ. ಯಾರು ಯಾರು ಈ ಷಡ್ಯಂತ್ರದ ಹಿಂದೆ ಇದ್ದಾರೆ ಎಂಬುದು ಗೊತ್ತಾಗಿದೆ. ಕ್ಷೇತ್ರವನ್ನ ಮುಗಿಸಬೇಕು, ಜನರು ಇಲ್ಲಿಗೆ ಬರಬಾರದು ಎಂದು ಈ ರೀತಿ ಮಾಡಿದ್ದಾರೆ. ಭಕ್ತರು ಬರುವುದು ಅವರವರ ಭಕ್ತಿಯಿಂದ, ಆದರೆ ಈ ರೀತಿ ಮಾಡಿ ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಈಗ ಇನ್ನಷ್ಟು ಸಾಮಾಜಿಕ ಕಾರ್ಯ ಮಾಡುವ ಯೋಜನೆಗಳ ಆಲೋಚನೆ ಬರುತ್ತಿವೆ. ಮುಂದೆಯೂ ಈ ಕ್ಷೇತ್ರದಿಂದ ಸತ್ಕಾರ್ಯ ನಡೆಯಲಿದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa