ಹುಬ್ಬಳ್ಳಿ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರವಿವಾರದ ರಾಶಿ ಫಲ
*ಮೇಷ ರಾಶಿ.*
ಮಕ್ಕಳು ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸಬೇಕು. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ಪ್ರಮುಖ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ವ್ಯವಹಾರಗಳಲ್ಲಿ ಹೂಡಿಕೆ ಮಾಡದಿರುವುದು ಉತ್ತಮ. ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.
*ವೃಷಭ ರಾಶಿ.*
ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಹಳೆಯ ವಿಷಯಗಳನ್ನು ಚರ್ಚಿಸುತ್ತೀರಿ. ವ್ಯಾಪಾರಗಳು ಮಂದಗತಿಯಲ್ಲಿ ಸಾಗುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೀರಿ. ಆರ್ಥಿಕ ಸಮಸ್ಯೆಗಳಿರುತ್ತವೆ . ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ. ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ.
*ಮಿಥುನ ರಾಶಿ.*
ಆಸ್ತಿ ವಿವಾದಗಳು ಪರಿಹಾರದತ್ತ ಸಾಗುತ್ತವೆ. ಆತ್ಮೀಯರಿಂದ ಶುಭ ಸುದ್ದಿ ದೊರೆಯುತ್ತದೆ. ಹಠಾತ್ ಧನ ಲಾಭ ದೊರೆಯುತ್ತದೆ. ವ್ಯಾಪಾರಗಳಿಗೆ ಲಾಭ ದೊರೆಯುತ್ತದೆ . ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಮನೆಯಲ್ಲಿ ಕೆಲವು ಆಶ್ಚರ್ಯಕರ ವಿಷಯಗಳನ್ನು ತಿಳಿದುಕೊಳ್ಳುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಒತ್ತಡಗಳನ್ನು ನಿವಾರಿಸುತ್ತೀರಿ.
*ಕಟಕ ರಾಶಿ.*
ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದಾಗಿ, ಸಾಕಷ್ಟು ವಿಶ್ರಾಂತಿ ಇರುವುದಿಲ್ಲ.
*ಸಿಂಹ ರಾಶಿ.*
ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ಮಕ್ಕಳ ಶೈಕ್ಷಣಿಕ ವಿಷಯಗಳು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಚರ್ಚೆಗಳು ಫಲ ನೀಡುತ್ತವೆ. ಸಮಾಜದಲ್ಲಿ ಖ್ಯಾತಿಯನ್ನು ಹೆಚ್ಚಾಗುತ್ತದೆ. ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ನಿರುದ್ಯೋಗಿಗಳ ನಿರೀಕ್ಷೆಗಳು ಈಡೇರುತ್ತವೆ.
*ಕನ್ಯಾ ರಾಶಿ.*
ದೈವಿಕ ಚಿಂತನೆ ಹೆಚ್ಚಾಗುತ್ತದೆ. ಕುಟುಂಬದ ವಾತಾವರಣವು ಸಮಸ್ಯಾತ್ಮಕವಾಗಿರುತ್ತದೆ , ಉದ್ಯೋಗದಲ್ಲಿ ಕೆಲವರ ನಡವಳಿಕೆಯಿಂದ ತಲೆನೋವು ಉಂಟಾಗುತ್ತದೆ. ಕೆಲವು ಕೆಲಸಗಳಲ್ಲಿ ಅಡೆತಡೆಗಳಿರುತ್ತವೆ. ಹಣಕಾಸಿನ ತೊಂದರೆಯಿಂದ ಹೊಸ ಸಾಲಗಳನ್ನು ಮಾಡಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ.
*ತುಲಾ ರಾಶಿ.*
ವೌಲ್ಯದ ವಸ್ತು ಲಾಭ ದೊರೆಯುತ್ತದೆ. ಬಾಲ್ಯದ ಸ್ನೇಹಿತರಿಂದ ಮದುವೆಯ ಆಮಂತ್ರಣಗಳನ್ನು ಸ್ವೀಕರಿಸುತ್ತೀರಿ. ಕುಟುಂಬದ ಸದಸ್ಯರಿಂದ ವ್ಯಾಪಾರ ವಿಸ್ತರಣೆಗೆ ಸಹಾಯ ಸಹಕಾರ ದೊರೆಯುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಕಂಡುಬರುತ್ತದೆ. ಉದ್ಯೋಗದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.
*ವೃಶ್ಚಿಕ ರಾಶಿ.*
ಹಣಕಾಸಿನ ವಿಷಯಗಳು ತೃಪ್ತಿಕರವಾಗಿರುತ್ತವೆ. ಕೈಗೊಂಡ ಕೆಲಸದಲ್ಲಿ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ವ್ಯಾಪಾರದಲ್ಲಿ ಸ್ವಲ್ಪ ಪ್ರಗತಿ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುತ್ತದೆ. ಪ್ರಮುಖ ವ್ಯಕ್ತಿಗಳಿಂದ ಸಿಗುವ ಮಾಹಿತಿ ಸಮಾಧಾನ ತರುತ್ತದೆ. ಉದ್ಯೋಗದ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ.
*ಧನುಸ್ಸು ರಾಶಿ.*
ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಕೆಲಸದಲ್ಲಿ ಅಡೆತಡೆಗಳಿರುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಹಳೆಯ ಸಾಲಗಳನ್ನು ತೀರಿಸಲು ಹೊಸ ಸಾಲಗಳನ್ನು ಮಾಡಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವ್ಯವಹಾರಗಳಲ್ಲಿ ಅಡೆತಡೆಗಳಿರುತ್ತವೆ.
*ಮಕರ ರಾಶಿ.*
ಕೈಗೆತ್ತಿಕೊಂಡ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಹಣಕಾಸಿನ ಪರಿಸ್ಥಿತಿ ಅಸ್ತವ್ಯಸ್ತವಾಗಿರುತ್ತದೆ. ದೂರ ಪ್ರಯಾಣಗಳು ಆಯಾಸವನ್ನುಂಟು ಮಾಡುತ್ತವೆ. ಬಂಧು ಮಿತ್ರರೊಂದಿಗೆ ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗ ಪರಿಸ್ಥಿತಿಗಳು ತುಂಬಾ ಕಳಪೆಯಾಗಿರುತ್ತವೆ.
*ಕುಂಭ ರಾಶಿ.*
ಸಮಾಜದಲ್ಲಿ ಪ್ರಸಿದ್ಧ ವ್ಯಕ್ತಿಗಳ ಪರಿಚಯಗಳು ಹೆಚ್ಚಾಗುತ್ತವೆ. ಆತ್ಮೀಯರಿಂದ ಶುಭ ಕಾರ್ಯ ಆಹ್ವಾನಗಳು ಬರುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ವಿಯಾಗುತ್ತೀರಿ. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಶುಭ ಸುದ್ದಿ ದೊರೆಯುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿವಾರಿಸುತ್ತೀರಿ. ಆರ್ಥಿಕ ಲಾಭಗಳಿರುತ್ತವೆ.
*ಮೀನ ರಾಶಿ.*
ಮನೆಯ ಹೊರಗಿನ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆರ್ಥಿಕ ಸಮೃದ್ಧಿ ಇರುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ಆಪ್ತ ಸ್ನೇಹಿತರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಬೆಲೆಬಾಳುವ ವಸ್ತು ಮತ್ತು ವಾಹನ ಲಾಭಗಳನ್ನು ಪಡೆಯುತ್ತೀರಿ. ವ್ಯವಹಾರದ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa